ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಸೂಪರ್‌ಫುಡ್‌ಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯ ನಡುವೆ, ಸಾಂಪ್ರದಾಯಿಕ ಭಾರತೀಯ ಸಿರಿಧಾನ್ಯಗಳಾದ ರಾಗಿ (Ragi) ಮತ್ತು ಸಜ್ಜೆ ಮತ್ತೊಮ್ಮೆ ಕೇಂದ್ರಬಿಂದುವಾಗಿವೆ. ಯೋಗ ಗುರು ಮತ್ತು ಪತಂಜಲಿ ಸಹ-ಸಂಸ್ಥಾಪಕ ಬಾಬಾ ರಾಮದೇವ್ ಅವರು ಇತ್ತೀಚಿನ ವಿಡಿಯೋವೊಂದರಲ್ಲಿ ಈ ಎರಡು ಸಿರಿಧಾನ್ಯಗಳಿಂದ ಮಾಡಿದ ರೊಟ್ಟಿಯ ಮಹತ್ವವನ್ನು ವಿವರಿಸಿದ್ದಾರೆ. ಬೆಳ್ಳುಳ್ಳಿ ಚಟ್ನಿಯೊಂದಿಗೆ ಈ ರೊಟ್ಟಿಯನ್ನು ಸವಿಯುವ ಖುಷಿ ಹಾಗೂ ಅದರ ಅಪಾರ ಆರೋಗ್ಯ ಪ್ರಯೋಜನಗಳನ್ನು ಅವರು ಹಾಡಿ ಹೊಗಳಿದ್ದಾರೆ.
ಆಯುರ್ವೇದದಲ್ಲಿ ವರ್ಣಿಸಲಾಗಿರುವ 9 ಸಿರಿಧಾನ್ಯಗಳಲ್ಲಿ ರಾಗಿ, ಸಜ್ಜೆ, ನವಣೆಯಂತಹ ಧಾನ್ಯಗಳು ಸೇರಿವೆ. ಈ ಪೈಕಿ, ರಾಗಿಯನ್ನು ಸರ್ವ ಋತುಗಳ ಆಹಾರ ಎಂದು ಪರಿಗಣಿಸಿದರೆ, ಸಜ್ಜೆ ಚಳಿಗಾಲದ ಆಹಾರ ಎನಿಸಿದೆ. ಸಜ್ಜೆ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುವುದರಿಂದ ಮತ್ತು ಅಪಾರ ಶಕ್ತಿಯನ್ನು ನೀಡುವುದರಿಂದ ಆಯುರ್ವೇದವು ಇದನ್ನು ವರದಾನವೆಂದು ಹೇಳುತ್ತದೆ.
ರಾಗಿ Vs ಗೋಧಿ: ಯಾವುದು ಉತ್ತಮ?
ಭಾರತದ ಬಹುತೇಕ ಭಾಗಗಳಲ್ಲಿ ಗೋಧಿ ಚಪಾತಿ ಮತ್ತು ಅನ್ನವು ಪ್ರಧಾನ ಆಹಾರವಾಗಿದೆ. ಆದರೆ, ಜೈಪುರ ಮೂಲದ ಆಯುರ್ವೇದ ತಜ್ಞೆ ಕಿರಣ್ ಗುಪ್ತಾ ಅವರ ಪ್ರಕಾರ, ಗೋಧಿ ಚಪಾತಿ ಹಾನಿಕಾರಕವಲ್ಲದಿದ್ದರೂ, ಅದು ಹೆಚ್ಚು ಪ್ರಯೋಜನಕಾರಿ ಅಲ್ಲ.
ಮತ್ತೊಂದೆಡೆ, ಸಜ್ಜೆ ಹಿಟ್ಟು ಫೈಬರ್‌ನಲ್ಲಿ ಸಮೃದ್ಧವಾಗಿದೆ, ಇದು ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಅತ್ಯುತ್ತಮವಾದುದು. ರಾಗಿ ಮತ್ತು ಸಜ್ಜೆ ಎರಡೂ ಸಹ ಸೂಪರ್ ಫುಡ್‌ಗಳಾಗಿದ್ದು, ಅವುಗಳಲ್ಲಿ ಕೊಬ್ಬು ಕಡಿಮೆ ಮತ್ತು ಪೋಷಕಾಂಶಗಳು ಹೆಚ್ಚು.
ಸಜ್ಜೆಯಲ್ಲಿರುವ ಪೋಷಕಾಂಶಗಳ ಖಜಾನೆ:
ಸಜ್ಜೆ ಕೇವಲ ಫೈಬರ್ ಮಾತ್ರವಲ್ಲದೆ, ಕ್ಯಾಲೋರಿ, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಐರನ್, ಮೆಗ್ನೀಸಿಯಮ್, ಸಲ್ಫರ್, ಪೊಟ್ಯಾಸಿಯಮ್, ಜಿಂಕ್ ಮತ್ತು ವಿಟಮಿನ್ ಬಿ1, ಬಿ2, ಬಿ3, ಮತ್ತು ಫೋಲೇಟ್‌ನಂತಹ ಅನೇಕ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ.

