Friday, November 14, 2025

Vastu | ಅಡುಗೆಮನೆಯಲ್ಲಿ ಈ ವಸ್ತುಗಳನ್ನು ತಪ್ಪಿಯೂ ಇಡಬೇಡಿ! ಇಟ್ರೆ ನಿಮಗೆ ನಷ್ಟ

ಹಿಂದು ಪರಂಪರೆಯಲ್ಲಿ ಅಡುಗೆಮನೆ ಅನ್ನಪೂರ್ಣೆಯ ಪವಿತ್ರ ವಾಸಸ್ಥಾನವೆಂದು ನಂಬಲಾಗುತ್ತದೆ. ಆದ್ದರಿಂದ ಇಲ್ಲಿ ಇರುವ ಪ್ರತಿಯೊಂದು ವಸ್ತುವೂ ಮನೆಯ ಶಕ್ತಿ, ಆರೋಗ್ಯ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ನೇರ ಪರಿಣಾಮ ಬೀರುತ್ತವೆ ಎಂಬುದು ವಾಸ್ತು ಶಾಸ್ತ್ರದ ಸಂದೇಶ.

ಅಡುಗೆಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದನ್ನು ವಾಸ್ತು ದೋಷವೆಂದು ಪರಿಗಣಿಸುತ್ತದೆ. ಇವು ಮನೆಯಲ್ಲಿ ಬಡತನ, ಜಗಳ-ಜಂಜಾಟ, ನಕಾರಾತ್ಮಕತೆ ಮತ್ತು ರೋಗಗಳನ್ನು ಹೆಚ್ಚಿಸಬಹುದೆಂದು ನಂಬಿಕೆ. ಮನೆ ಶಾಂತಿ ಮತ್ತು ಸಮೃದ್ಧಿಗಾಗಿ ಅಡುಗೆಮನೆಯಲ್ಲಿ ಇರಬಾರದ ವಸ್ತುಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.

  • ತುಂಡಾದ ಪಾತ್ರೆಗಳು: ಬಿರುಕು ಬಿಟ್ಟ ಅಥವಾ ತುಂಡಾದ ಪಾತ್ರೆಗಳನ್ನು ಅಡುಗೆಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇವು ಕುಟುಂಬದಲ್ಲಿ ಅಶಾಂತಿ, ಹಣದ ನಷ್ಟಕ್ಕೆ ಕಾರಣವಾಗುತ್ತವೆ. ವಾಸ್ತುವಿನಲ್ಲಿ ತುಂಡಾದ ಪಾತ್ರೆಗಳು ಬಡತನದ ಸಂಕೇತವಾಗಿವೆ.
  • ಕೊಳೆತ ಧಾನ್ಯಗಳು: ಅವಧಿ ಮೀರಿದ ಮಸಾಲೆ, ಧಾನ್ಯ ಅಥವಾ ಬಳಕೆಯಾಗದ ಆಹಾರ ಪದಾರ್ಥಗಳು ಮನೆಯ ಶಕ್ತಿಯನ್ನು ಕುಗ್ಗಿಸುತ್ತವೆ. ಇಂತಹ ವಸ್ತುಗಳು ಕೀಟಗಳನ್ನು ಆಕರ್ಷಿಸುವುದಷ್ಟೇ ಅಲ್ಲ, ಮನೆಯ ಆರ್ಥಿಕ ವ್ಯವಹಾರದಲ್ಲಿ ಅಸ್ಥಿರತೆ ಉಂಟುಮಾಡುತ್ತವೆ.
  • ಬಳಸಿದ ಎಣ್ಣೆ: ಮರುಬಳಕೆ ಎಣ್ಣೆ ಆರೋಗ್ಯಕ್ಕೆ ಹಾನಿಕಾರಕವಾಗಿರುವುದರ ಜೊತೆಗೆ ವಾಸ್ತುವಿನ ಪ್ರಕಾರ ಹಣಕಾಸು ತೊಂದರೆಗಳನ್ನು ಆಹ್ವಾನಿಸುತ್ತದೆ. ಹಳೆಯ ಎಣ್ಣೆಯ ಶಕ್ತಿ ಸ್ಥಬ್ಧವಾಗಿದ್ದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
  • ಕನ್ನಡಿಗಳು: ಅಡುಗೆಮನೆಯಲ್ಲಿ ಕನ್ನಡಿ ಇರಿಸುವುದು ವಾಸ್ತುವಿನಲ್ಲಿ ದೊಡ್ಡ ದೋಷ. ಇದು ಮನೆಯವರ ಮನೋಭಾವ, ಸಂಬಂಧಗಳು ಮತ್ತು ಶಕ್ತಿಚಲನವನ್ನೇ ಅಸ್ಥಿರಗೊಳಿಸುತ್ತದೆ.
  • ಪೊರಕೆ ಮತ್ತು ಮಾಪ್: ಪೊರಕೆ ಲಕ್ಷ್ಮಿದೇವಿಯ ಸಂಕೇತ. ಅದನ್ನು ಅಡುಗೆಮನೆಯಲ್ಲಿ ಇಡುವುದನ್ನು ಅವಮಾನವೆಂದು ಪರಿಗಣಿಸಲಾಗುತ್ತದೆ. ಇದು ಸಂಪತ್ತಿನ ನಷ್ಟಕ್ಕೆ ಕಾರಣವಾಗುತ್ತದೆ ಎಂದು ವಾಸ್ತು ಹೇಳುತ್ತದೆ.
error: Content is protected !!