Friday, November 14, 2025

Children’s Day: ದೇಶದ ಭವಿಷ್ಯವನ್ನು ಬೆಳಗುವ ಪುಟ್ಟ ಕೈಗಳ ಮಹತ್ವ ನಿಮಗೂ ಗೊತ್ತಿರಲಿ

ಮಕ್ಕಳ ನಗು ಅದೇ ಒಂದು ಮನೆಯ ಬೆಳಕು, ಸಮಾಜದ ಚೈತನ್ಯ ಮತ್ತು ದೇಶದ ಭವಿಷ್ಯದ ಮೊದಲ ಹೆಜ್ಜೆ. ಆ ಪುಟ್ಟ ಹೆಜ್ಜೆಗಳನ್ನು ದೊಡ್ಡ ಕನಸುಗಳನ್ನು ಸಾಕಾರಗೊಳಿಸೋಕೆ ಮೋಡಲ್ ಹೆಜ್ಜೆ ಇಡುವ ದಿನವೇ ನವೆಂಬರ್ 14. ಈ ದಿನ ಕೇವಲ ಒಂದು ಆಚರಣೆಯಲ್ಲ; ಅದು ಬಾಲ್ಯವನ್ನು ರಕ್ಷಿಸಲು, ಮಕ್ಕಳ ಕನಸುಗಳಿಗೆ ರೆಕ್ಕೆ ನೀಡಲು ಮತ್ತು ಅವರ ಭವಿಷ್ಯವನ್ನು ನಿರ್ಮಿಸುವ ಅದ್ಭುತ ದಿನ. ಈ ದಿನದ ಉದ್ದೇಶ, ಮಕ್ಕಳನ್ನು ಕೇವಲ “ಸಣ್ಣವರು” ಎಂದು ನೋಡುವುದಲ್ಲ, ಬದಲಿಗೆ ಅವರಲ್ಲಿ ಅಡಗಿರುವ ಅದ್ಭುತ ಸೃಜನಶೀಲತೆ, ಕುತೂಹಲ ಮತ್ತು ಬದಲಾವಣೆ ತರಬಲ್ಲ ಶಕ್ತಿಯನ್ನು ಗೌರವಿಸುವುದು.

ಮಕ್ಕಳ ದಿನದ ಇತಿಹಾಸವು ಪಂಡಿತ ಜವಾಹರ್ ಲಾಲ್ ನೆಹರು ಅವರ ಪ್ರೀತಿ ಮತ್ತು ದೃಷ್ಟಿಕೋನದಿಂದ ರೂಪುಗೊಂಡಿದೆ. ಮಕ್ಕಳನ್ನು ಕಂಡಾಗ ಅವರ ಕಣ್ಣು ಹೊಳೆಯುತ್ತಿತ್ತೆಂದರೆ ಆಶ್ಚರ್ಯವಿಲ್ಲ; ಕಾರಣ, ಅವರು ರಾಷ್ಟ್ರದ ಭವಿಷ್ಯವನ್ನು ಆ ಮಕ್ಕಳ ಕಣ್ಣುಗಳಲ್ಲಿ ಕಾಣುತ್ತಿದ್ದರು. ನೆಹರು ಅವರ ಜನ್ಮದಿನವಾದ ನವೆಂಬರ್ 14, 1964ರಿಂದ ಮಕ್ಕಳ ದಿನವಾಗಿ ಪರಿವರ್ತಿತವಾಯಿತು. ಅವರ ಸಂದೇಶಕ್ಕೂ, ಅವರ ಕನಸಿಗೂ ನಮನವಾಗಿ. “ಬಾಲ್ಯವನ್ನು ರಕ್ಷಿಸಿ, ಶಿಕ್ಷಣ ನೀಡಿ, ಬೆಳವಣಿಗೆಗೆ ಅವಕಾಶ ಕೊಡಿ” ಎಂಬ ಮಾತು ಕೇವಲ ಘೋಷಣೆ ಅಲ್ಲ; ಅದು ಸಮಾಜದ ಭವಿಷ್ಯ ನಿರ್ಮಾಣದ ಶಿಲಾಶಾಸನವಾಗಿದೆ.

ಮಕ್ಕಳ ದಿನವನ್ನು ನಾವು ಏಕೆ ಆಚರಿಸಬೇಕು?:

ಯಾಕೆಂದರೆ ಮಕ್ಕಳಿಗೆ ಅವರದ್ದೇ ಕನಸುಗಳಿವೆ. ಅವರಿಗೆ ಹಕ್ಕುಗಳಿವೆ. ಸುರಕ್ಷತೆಗೆ, ಶಿಕ್ಷಣಕ್ಕೆ, ಪ್ರೀತಿಗೆ, ಗೌರವಕ್ಕೆ ನಾವು ಈ ದಿನವನ್ನು ಆಚರಿಸಬೇಕು. ಮಕ್ಕಳ ದಿನವು ಮಕ್ಕಳ ಮೇಲಿನ ಹೊಣೆಗಾರಿಕೆಯನ್ನು ದೊಡ್ಡವರಿಗೆ ನೆನಪಿಸುವ ವಿಶಿಷ್ಟ ವೇದಿಕೆ. ವಿಶ್ವಸಂಸ್ಥೆಯೂ ಇದೇ ಸಂದೇಶವನ್ನು ನೀಡುತ್ತ, ಮಕ್ಕಳ ಹಕ್ಕುಗಳನ್ನು ಜಾಗತಿಕ ಮಟ್ಟದಲ್ಲಿ ಒತ್ತಿ ಹೇಳಿದೆ.

error: Content is protected !!