ನಮ್ಮ ಅಜ್ಜ–ಅಜ್ಜಿಯ ಕಾಲದಿಂದಲೂ ಬ್ರಾಹ್ಮಿ ಸೊಪ್ಪನ್ನು ಮೆದುಳಿನ ಶಕ್ತಿ, ನೆನಪು ಶಕ್ತಿ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುವ ‘ಬ್ರೈನ್ ಟೋನಿಕ್’ ಎಂದು ಬಳಸಲಾಗುತ್ತಿತ್ತು. ಈ ಅಮೂಲ್ಯ ಸೊಪ್ಪನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಸರಳ ಮತ್ತು ರುಚಿಕರ ವಿಧಾನವೇ ಬ್ರಾಹ್ಮಿ ಚಟ್ನಿ. ಕಡಿಮೆ ಸಾಮಗ್ರಿ, ಸಾಂಪ್ರದಾಯಿಕ ರುಚಿ ಮತ್ತು ಆರೋಗ್ಯಕರ ಗುಣಗಳ ಕಾರಣದಿಂದ ಇದು ಮಕ್ಕಳಿಂದ ಹಿರಿಯರವರವರೆಗೆ ಎಲ್ಲರಿಗೂ ಒಳ್ಳೆಯದು.
ತಯಾರಿಸುವ ವಿಧಾನ
ಸಾಮಗ್ರಿಗಳು:
ಬ್ರಾಹ್ಮಿ ಸೊಪ್ಪು – 1 ಕಪ್
ತೆಂಗಿನ ತುರಿ – ½ ಕಪ್
ಹಸಿಮೆಣಸು – 2
ಬೆಳ್ಳುಳ್ಳಿ – 2 ಕತೆ
ಜೀರಿಗೆ – ½ ಟೀಸ್ಪೂನ್
ಹುಣಸೆ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – 1 ಟೀಸ್ಪೂನ್
ನೀರು – ಅಗತ್ಯವಿದ್ದಷ್ಟು
ತಯಾರಿಸುವ ವಿಧಾನ:
ಮೊದಲು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಜೀರಿಗೆ, ಬೆಳ್ಳುಳ್ಳಿ ಮತ್ತು ಹಸಿಮೆಣಸನ್ನು ಹುರಿಯಿರಿ.
ನಂತರ ಬ್ರಾಹ್ಮಿ ಸೊಪ್ಪು ಸೇರಿಸಿ ಹಸಿ ವಾಸನೆ ಹೋಗುವಷ್ಟು ಹುರಿಯಿರಿ. ಮಿಕ್ಸರ್ ಜಾರ್‌ನಲ್ಲಿ ಹುರಿದ ಎಲ್ಲ ಸಾಮಗ್ರಿಗಳು, ತೆಂಗಿನ ತುರಿ, ಹುಣಸೆ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಮೃದುವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ದಪ್ಪ ಅಥವಾ ತೆಳುವಾಗಿ ನಿಮಗೆ ಬೇಕಾದಂತೆ ನೀರಿನ ಪ್ರಮಾಣವನ್ನು ಹೊಂದಿಸಬಹುದು.

