ಭಾರತೀಯ ಸಂಪ್ರದಾಯದಲ್ಲಿ ಶಂಖವು ಕೇವಲ ಪೂಜಾ ಸಾಮಗ್ರಿಯಲ್ಲ, ಅದು ಶುಭಶಕ್ತಿಯ ಸಂಕೇತವೂ ಹೌದು. ಲಕ್ಷ್ಮೀ ದೇವಿಯ ಆಶೀರ್ವಾದ ಹೊಂದಿದೆ ಎಂದು ನಂಬುವ ಶಂಖ, ಮನೆಯಲ್ಲಿ ಸರಿಯಾದ ರೀತಿಯಲ್ಲಿ ಇರಿಸಿದಾಗ ಧನಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎನ್ನಲಾಗುತ್ತದೆ.
- ಶಂಖವನ್ನು ಪೂಜಾ ಕೋಣೆಯಲ್ಲೇ ಇಡಿ: ಶಂಖ ಸದಾ ಶುಚಿತ್ವದ ಸ್ಥಳದಲ್ಲೇ ಇರಬೇಕು. ದೇವರ ಪಕ್ಕದಲ್ಲಿ ಕೆಂಪು ಅಥವಾ ಹಳದಿ ಬಟ್ಟೆಯ ಮೇಲೆ ಇಟ್ಟರೆ ಶುಭಫಲ ಹೆಚ್ಚುತ್ತದೆ.
- ಪೂರ್ವ ದಿಕ್ಕಿನಲ್ಲಿ ಇಡುವುದು ಉತ್ತಮ: ಶಂಖವನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಅತ್ಯಂತ ಮಂಗಳಕರ. ಇದು ಸಾಧ್ಯವಿಲ್ಲವಾದರೆ ವಾಯುವ್ಯ ದಿಕ್ಕು ಉತ್ತಮ.
- ಕಾರಣವಿಲ್ಲದೆ ಶಂಖ ಊದಬೇಡಿ: ಶಂಖವನ್ನು ಪೂಜೆಯ ಮೊದಲು ಮತ್ತು ನಂತರ ಮಾತ್ರ ಊದಬೇಕು. ಇದು ಮನೆಯಲ್ಲಿ ಶಾಂತಿ ಮತ್ತು ಪಾಸಿಟಿವಿಟಿಯನ್ನು ಹೆಚ್ಚಿಸುತ್ತದೆ. ಕಾರಣವಿಲ್ಲದೆ ಊದಬೇಡಿ.
- ಶಂಖವನ್ನು ನೆಲದ ಮೇಲೆ ಇರಿಸುವುದು ತಪ್ಪು: ನೆಲಕ್ಕೆ ಸ್ಪರ್ಶಿಸಿದರೆ ಅದು ಅಗೌರವವಾಗಿ ಪರಿಗಣಿಸಲಾಗುತ್ತದೆ. ಸದಾ ಶುಚಿಯಾದ ಬಟ್ಟೆಯ ಮೇಲೆಯೇ ಇಡಿ.
- ಆರ್ಥಿಕ ಲಾಭಕ್ಕೆ ಗಂಗಾಜಲ ಬಳಕೆ: ಪೂಜೆಯ ನಂತರ ಶಂಖದಲ್ಲಿ ಗಂಗಾಜಲ ತುಂಬಿಸಿ ಮನೆಯಲ್ಲಿ ಚಿಮುಕಿಸಿದರೆ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.
- ಶಂಖದ ಬಾಯಿ ಮೇಲಕ್ಕೆ ಇರಲಿ: ಶಂಖದ ಬಾಯಿಯನ್ನು ಮೇಲಕ್ಕೆ ಇರಿಸಿದರೆ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ. ವಿಷ್ಣು-ಲಕ್ಷ್ಮೀ ವಿಗ್ರಹದ ಬಳಿ ಇಡುವುದು ಅತ್ಯಂತ ಶುಭ.
- ಶಂಖ ಬಳಕೆ ನಂತರ ಶುದ್ಧೀಕರಿಸಿ: ಪ್ರತಿ ಸಾರಿ ಶಂಖ ಊದಿದ ಬಳಿಕ ಗಂಗಾಜಲದಲ್ಲಿ ತೊಳೆಯಬೇಕು. ಶುದ್ಧ ಶಂಖ ಮನೆಗೆ ಶುಭವೂ ಶಾಂತಿಯೂ ತರುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ)

