ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಎಂದರೆ ಟ್ರಾಫಿಕ್ ಶಬ್ದ, ಕೆಫೆ ತಿಂಡಿಗ ಪರಿಮಳ, ಸ್ಟಾರ್ಟ್‌ಅಪ್‌ಗಳ ಆರಂಭ. ಇವೆಲ್ಲವೂ ನಮ್ಮ ಮನಸ್ಸಿನಲ್ಲಿ ಮೊದಲು ಮೂಡುವ ಚಿತ್ರಗಳು. ಆದರೆ ಈ ನಗರಕ್ಕೆ ಇನ್ನೊಂದು ಮುಖವಿದೆ. ಆ ಮುಖ ಮೌನದಿಂದ ತುಂಬಿರುತ್ತದೆ, ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತದೆ. ಪ್ರಾರ್ಥನೆ ಮತ್ತು ಶಾಂತಿಯ ನಡುವೆ ಬದುಕಿನ ಗದ್ದಲಕ್ಕೆ ವಿರಾಮ ನೀಡುವ ಸ್ಥಳಗಳೂ ಇಲ್ಲಿವೆ.
- ಇಸ್ಕಾನ್ ದೇವಸ್ಥಾನ, ರಾಜಾಜಿನಗರ: ಈ ದೇವಾಲಯದ ಮೆಟ್ಟಿಲು ಹತ್ತುವಷ್ಟರಲ್ಲಿ “ಹರೇ ಕೃಷ್ಣ” ಮಂತ್ರಗಳು ಮನಸ್ಸನ್ನು ಶಾಂತಗೊಳಿಸುತ್ತವೆ. ಸೂರ್ಯಾಸ್ತದಲ್ಲಿ ಹೊಳೆಯುವ ಚಿನ್ನದ ಗುಮ್ಮಟಗಳು, ತಂಪಾದ ಅಮೃತಶಿಲೆಯ ನೆಲ ಮತ್ತು ಸಂಜೆಯ ಆರತಿ ಇಲ್ಲಿ ದೈವೀ ಅನುಭವ ನೀಡುತ್ತದೆ.
- ಬುಲ್ ಟೆಂಪಲ್, ಬಸವನಗುಡಿ: ಒಂದೇ ಗ್ರಾನೈಟ್ ಕಲ್ಲಿನಿಂದ ಮಾಡಿದ ಬೃಹತ್ ನಂದಿ ಪ್ರತಿಮೆ ಈ ಪ್ರದೇಶದ ಗುರುತು. ಒಂದು ಕಾಲದಲ್ಲಿ ಸ್ಥಳೀಯ ಹೊಲಗಳನ್ನು ನಾಶಮಾಡಿದ್ದ ಗೂಳಿಯನ್ನು ಶಾಂತಗೊಳಿಸಲು ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಕಥೆ ಹೇಳುತ್ತದೆ. ಕಡಲೆಕಾಯಿ ಪರಿಷೆ ಕೂಡ ಇಲ್ಲಿಯೇ ನಡೆಯುತ್ತದೆ.
- ಗವಿ ಗಂಗಾಧರೇಶ್ವರ ದೇವಸ್ಥಾನ, ಗವಿಪುರಂ: ಬಂಡೆಯ ಗುಹೆಯೊಳಗೆ ಕೆತ್ತಿದ ಈ ದೇವಾಲಯ ಕಾಲಯಾನದಂತೆ ಅನಿಸುತ್ತದೆ. ಮಕರ ಸಂಕ್ರಾಂತಿಯಂದು ಸೂರ್ಯ ಕಿರಣ ಶಿವಲಿಂಗದ ಮೇಲೆ ಸಂಪೂರ್ಣವಾಗಿ ಬೀಳುವ ದೃಶ್ಯ ಅಪರೂಪದ ಅದ್ಭುತ.
- ಚೊಕ್ಕನಾಥಸ್ವಾಮಿ ದೇವಸ್ಥಾನ, ದೊಮ್ಮಲೂರು: ಸಾವಿರ ವರ್ಷಗಳ ಹಿಂದೆಯೇ ನಿರ್ಮಿಸಲ್ಪಟ್ಟ ಈ ದೇವಾಲಯ ಬೆಂಗಳೂರಿಗಿಂತ ಹಳೆಯದು. ಇಲ್ಲಿನ ಪಕ್ಷಿಗಳ ಸದ್ದು ಮುಂಜಾನೆ ಕಿವಿ ತಂಪಾಗಿಸುತ್ತದೆ ಮನಸ್ಸನ್ನು ತಣ್ಣಗಾಗಿಸುತ್ತವೆ.
- ಬನಶಂಕರಿ ದೇವಸ್ಥಾನ, ಬನಶಂಕರಿ: ಬನಶಂಕರಿ ದೇವಿಯ ಆರಾಧನೆ ಭಕ್ತಿ ಮತ್ತು ಹಬ್ಬ ಎರಡರ ಮಿಶ್ರಣ. ದೀಪಾಲಂಕಾರ ಮತ್ತು ಜಾತ್ರೆಯ ಸಂಭ್ರಮ ನಗರದ ಜೀವನಕ್ಕೆ ಸಾಂಪ್ರದಾಯಿಕ ಸ್ಪರ್ಶ ನೀಡುತ್ತದೆ.
ಬೆಂಗಳೂರು ಎಷ್ಟು ಆಧುನಿಕವಾಗಿದ್ದರೂ, ಈ ದೇವಾಲಯಗಳು ಅದರ ನಿಜವಾದ ಹೃದಯ. ಓಡುವ ನಗರವನ್ನೇ ಕ್ಷಣ ಮಾತ್ರ ನಿಲ್ಲಿಸಿ “ಇನ್ನೂ ಶಾಂತಿ ಇದೆ” ಎಂದು ಹೇಳುವ ಮಂತ್ರಗಳು ಇವು.

