ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಪವರ್ ಕಪಲ್ ಎಂದೇ ಗುರುತಿಸಿಕೊಂಡಿರುವ ನಟ ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ದಂಪತಿ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವದ (ಇಂದು) ದಿನದಂದೇ ಹೆಣ್ಣು ಮಗುವನ್ನು ಸ್ವಾಗತಿಸಿದ್ದು, ಈ ಕ್ಷಣವನ್ನು “ದೇವರಿಂದ ಬಂದ ಶ್ರೇಷ್ಠ ಆಶೀರ್ವಾದ” ಎಂದು ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನಾವು ಚಂದ್ರನ ಮೇಲೆ ಇದ್ದೇವೆ” ಎಂದು ಬರೆದಿರುವ ಈ ಜೋಡಿ, ಪೋಷಕರಾದ ಖುಷಿಯನ್ನು ಮಾತಿನಲ್ಲಿ ವ್ಯಕ್ತಪಡಿಸುವುದು ಕಷ್ಟ ಎಂದು ಹೇಳಿದ್ದಾರೆ.
ಇವರ ಜೀವನದ ಈ ಹೊಸ ಅಧ್ಯಾಯಕ್ಕೆ ಬಾಲಿವುಡ್ ಚಿತ್ರರಂಗದಿಂದ ಅನೇಕರು ಹಾರೈಸಿದ್ದು, ನಟ ವರುಣ್ ಧವನ್ “ನಮ್ಮ ಕ್ಲಬ್‌ಗೆ ಸ್ವಾಗತ” ಎಂದರೆ, ನಟಿ ನೇಹಾ ಧೂಪಿಯಾ “ಅತ್ಯುತ್ತಮ ಹಡ್‌ಗೆ ಸ್ವಾಗತ” ಎಂದು ಕಮೆಂಟ್ ಮಾಡಿದ್ದಾರೆ. ನಟ ಅಲಿ ಫಜಲ್ ಕೂಡ “ಓ ಮೈ ಗಾಡ್! ಇದನ್ನು ಕೇಳಿ ತುಂಬಾ ಸಂತೋಷವಾಯಿತು” ಎಂದು ಶುಭ ಕೋರಿದ್ದಾರೆ.
ಜುಲೈ ತಿಂಗಳಲ್ಲೇ ಗರ್ಭಧಾರಣೆಯ ಖುಷಿ ಸುದ್ದಿಯನ್ನು ಮುದ್ದಾದ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ದಂಪತಿ ಹಂಚಿಕೊಂಡಿದ್ದರು. ಸಿಟಿಲೈಟ್ಸ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದ ಈ ಜೋಡಿ ಸುಮಾರು 10 ವರ್ಷಗಳ ಪ್ರೀತಿಯ ನಂತರ 2021ರ ನವೆಂಬರ್‌ನಲ್ಲಿ ವಿವಾಹವಾಗಿದ್ದರು.

