Saturday, November 15, 2025

Skin Care | ಬೀಟ್‌ರೂಟ್‌ ಪಲ್ಯಕ್ಕೆ ಮಾತ್ರ ಅನ್ಕೊಂಡ್ರಾ? ಅಲ್ಲ ನಿಮ್ಮ ಮುಖದ ಕಾಂತಿನೂ ಹೆಚ್ಚಿಸುತ್ತೆ ಈ ತರಕಾರಿ

ಚರ್ಮಕ್ಕೆ ಬೇಗನೆ ಗ್ಲೋ ಬರಲೆಂದರೆ ದುಬಾರಿ ಪ್ರಾಡಕ್ಟ್ಸ್‌ ಬಳಸಲೇಬೇಕೆಂಬ ಅನಿವಾರ್ಯವಿಲ್ಲ. ನಿಮ್ಮ ಅಡಿಗೆಮನೆಯಲ್ಲಿ ಇರುವ ಸಣ್ಣ ಕೆಂಪು ಬೀಟ್‌ರೂಟ್‌ ಸಾಕು! ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ C ಹಾಗೂ ನೈಸರ್ಗಿಕ ಪಿಗ್ಮೆಂಟ್‌ಗಳು ಚರ್ಮಕ್ಕೆ ಒಳಗಿನಿಂದ ಪೋಷಣೆ ನೀಡಿ ಪಿಂಕ್‌ಗ್ಲೋ ಕೊಡುತ್ತವೆ. ಬೀಟ್‌ರೂಟ್ ಬಳಸಿ ಮಾಡುವ ಈ ಸರಳ ಟಿಪ್ಸ್‌ಗಳು ದೈನಂದಿನ ಚರ್ಮ ಆರೈಕೆಗೆ ಸೂಪರ್ ಪ್ರಯೋಜನಕಾರಿ.

  • ನ್ಯಾಚುರಲ್ ಪಿಂಕ್ ಗ್ಲೋ: ಬೀಟ್‌ರೂಟ್ ರಸವನ್ನು ಕಾಟನ್‌ನಿಂದ ಅದ್ದಿ ದಿನಕ್ಕೆ ಒಂದ್ಸಲ ಮುಖಕ್ಕೆ ಹಚ್ಚಿದರೆ ಚರ್ಮಕ್ಕೆ ಪಿಂಕ್‌ ಗ್ಲೋ ಬರುತ್ತದೆ ಮತ್ತು dullness ಕಡಿಮೆ ಆಗುತ್ತದೆ.
  • ಡಾರ್ಕ್ ಲಿಪ್ಸ್ ರೆಮೆಡಿ: ತಾಜಾ ಬೀಟ್‌ರೂಟ್ ತುಂಡನ್ನು ತುಟಿಗಳಿಗೆ ಸವರಿದರೆ ನೈಸರ್ಗಿಕ ಪಿಂಕ್‌ ಕಲರ್ ಬರುತ್ತದೆ. ಇದು ಲಿಪ್‌ಸ್ಟಿಕ್‌ಗೆ ನೈಸರ್ಗಿಕ ಪರ್ಯಾಯ.
  • ಟಾನ್ ರಿಮೂವಲ್ : ಬೀಟ್‌ರೂಟ್ ಪೇಸ್ಟ್‌ಗೆ ಮೊಸರು ಬೆರೆಸಿ ಮುಖಕ್ಕೆ ಹಚ್ಚಿದರೆ ಟ್ಯಾನ್ ಕಡಿಮೆಯಾಗುತ್ತದೆ ಮತ್ತು ಚರ್ಮ ಮೃದುವಾಗುತ್ತದೆ.
  • ಪಿಂಪಲ್ಸ್ ಕಂಟ್ರೋಲ್: ಬೀಟ್‌ರೂಟ್‌ನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮೊಡವೆ, ಕಲೆ ಹಾಗೂ ಕಪ್ಪು ಗುರುತುಗಳನ್ನು ನಿಧಾನವಾಗಿ ಕಡಿಮೆ ಮಾಡುತ್ತವೆ.
error: Content is protected !!