Monday, November 17, 2025

ದೆಹಲಿ ಕಾರು ಸ್ಫೋಟ: ಡಾ. ಉಮರ್‌ನ ಮತ್ತೊಂದು ವಿಡಿಯೋ ವೈರಲ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಕೆಂಪು ಕೋಟೆ ನಡೆದ ಕಾರ್‌ ಸ್ಫೋಟ ಘಟನೆಯಿಂದ ಇನ್ನೂ ದೇಶ ಚೇತರಿಸಿಕೊಂಡಿಲ್ಲ. ಇದೀಗ ಉಗ್ರರ ಈ ಕೃತ್ಯದ ಒಂದೊಂದೇ ರಹಸ್ಯ ಬಯಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಮೂಲದ ವೈದ್ಯ ಡಾ. ಉಮರ್‌ ಮೊಹಮ್ಮದ್‌ ಹ್ಯುಂಡೈ ಐ20 ಕಾರನ್ನು ಚಲಾಯಿಸಿಕೊಂಡು ಬಂದು ಕೆಂಪು ಕೋಟೆಯ ಮೆಟ್ರೋ ಸ್ಟೇಷನ್‌ ಬಳಿ ಸ್ಫೋಟಿಸಿದ್ದು, ಪುರಾವೆ ಮೂಲಕ ದೃಢಪಟ್ಟಿದೆ.

ಇದೀಗ ಡಾ. ಉಮರ್‌ ಕುರಿತ ಮತ್ತೊಂದು ಸಿಸಿಟಿವಿ ದೃಶ್ಯಾವಳಿ ಹೊರ ಬಿದ್ದಿದೆ. ಅಕ್ಟೋಬರ್‌ 30ರಂದು ಹರಿಯಾಣದ ಫರಿದಾಬಾದ್‌ನ ಮೊಬೈಲ್ ಅಂಗಡಿಯಲ್ಲಿ ಉಮರ್‌ 2 ಮೊಬೈಲ್‌ ಹಿಡಿದುಕೊಂಡು ನಿಂತಿರುವ ದೃಶ್ಯ ಇದಾಗಿದೆ.

https://x.com/m_kushagra/status/1989635007053521406?ref_src=twsrc%5Etfw%7Ctwcamp%5Etweetembed%7Ctwterm%5E1989635007053521406%7Ctwgr%5E0fbddb5881d6114553f4b26fd0911d11cdaeea92%7Ctwcon%5Es1_&ref_url=https%3A%2F%2Fvishwavani.news%2Fnational%2Fnew-cctv-shows-delhi-bomber-dr-umar-at-faridabad-mobile-shop-60830.html

ವಿಡಿಯೊದಲ್ಲಿ ಡಾ. ಉಮರ್ ತನ್ನ ಬ್ಯಾಗ್‌ನಿಂದ ಫೋನ್ ತೆಗೆದು ಅಂಗಡಿಯವರಿಗೆ ಚಾರ್ಜ್ ಮಾಡಲು ನೀಡುತ್ತಿರುವುದನ್ನು ಸೆರೆಯಾಗಿದೆ. ಜತೆಗೆ ಇನ್ನೊಂದು ಮೊಬೈಲ್‌ ಕೂಡ ಆತನ ಬಳಿ ಇತ್ತು. ಆದಾಗ್ಯೂ ಆತನ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಯಾವುದೇ ಮೊಬೈಲ್ ಫೋನ್‌ ತುಣುಕು ಕಂಡು ಬಂದಿಲ್ಲ. ಆತನ ಮೊಬೈಲ್‌ ಎಲ್ಲಿದೆ ಎನ್ನುವ ಬಗ್ಗೆ ಅನುಮಾನ ಮೂಡಿದೆ. ಮಧ್ಯಾಹ್ನ ಕಾರನ್ನು ಪಾರ್ಕಿಂಗ್‌ ಏರಿಯಾದಲ್ಲಿ ನಿಲ್ಲಿಸಿದ್ದ ಆತ ಅದರಲ್ಲೇ ಸಂಜೆಯವರೆಗೆ ಇದ್ದು, 6 ಗಂಟೆಯ ಬಳಿಕ ಅದನ್ನು ಚಾಲಾಯಿಸಿಕೊಂಡು ಹೋಗಿದ್ದ. ಈ ವೇಳೆ ಸಿಗ್ನಲ್‌ ಬಳಿ ಸ್ಫೋಟಗೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಅದಕ್ಕೂ ಮೊದಲು ಪೊಲೀಸರು ಫರಿದಾಬಾದ್ ವಿವಿದ ಕಡೆಗಳಲ್ಲಿ ದಾಳಿ ನಡೆಸಿ ಉಗ್ರ ಜಾಲವನ್ನು ಭೇದಿಸಿ ಬರೋಬ್ಬರಿ 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಸ್ಫೋಟದ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ರಾತ್ರಿಯಿಡೀ ದಾಳಿ ನಡೆಸಿ, ಡಾ. ಉಮರ್ ಕುಟುಂಬದ ಮೂವರು ಸದಸ್ಯರು ಸೇರಿದಂತೆ 6 ಮಂದಿಯನ್ನು ಬಂಧಿಸಿದರು.

ಸ್ಫೋಟ ನಡೆದ ಸ್ಥಳದಿಂದ ಸಂಗ್ರಹಿಸಲಾದ ಡಿಎನ್‌ಎ ಮಾದರಿಗಳ ಮೂಲಕ ಡಾ. ಉಮರ್‌ನ ಗುರುತನ್ನು ದೃಢಪಡಿಸಲಾಗಿದೆ. ಅದು ಅವನ ತಾಯಿಯ ಡಿಎನ್‌ಎ ಜತೆ ಹೊಂದಿಕೆಯಾಗಿದೆ.

1989ರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಜನಿಸಿದ ಉಮರ್‌ ಫರಿದಾಬಾದ್‌ನ ಅಲ್‌ ಪಲಾಹ್‌ ಮೆಡಿಕಲ್‌ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಸದ್ಯ ಈ ಕಾಲೇಜಿನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

error: Content is protected !!