ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಹನಮಾಪುರದಲ್ಲಿ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಏಕಾಂಗಿಯಾಗಿ ವಾಸಿಸುತ್ತಿದ್ದ 70 ವರ್ಷದ ಪಕೀರವ್ವ ರಾಮಣ್ಣ ಆಲೂರು ಮಲಗಿದ್ದ ವೇಳೆ ಮನೆಯೊಳಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಕಟ್ಟಡ ಸಂಪೂರ್ಣವಾಗಿ ಜ್ವಾಲೆಗೆ ಆಹುತಿಯಾಯಿತು. ಬೆಂಕಿ ನಿಯಂತ್ರಣಕ್ಕೆ ಬರುವಷ್ಟರಲ್ಲೇ ಪಕೀರವ್ವ ಸಜೀವ ದಹನಗೊಂಡಿದ್ದರು.
ಘಟನೆ ನಡೆದ ಸಮಯದಲ್ಲಿ ಮನೆಯಲ್ಲೇ ಪಕೀರವ್ವ ಒಬ್ಬರೇ ಇದ್ದರು. ಸ್ಥಳೀಯರು ದಟ್ಟ ಹೊಗೆ ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ, ಅಧಿಕಾರಿಗಳು ಬರುವಷ್ಟರಲ್ಲಿ ಬೆಂಕಿ ಎಲ್ಲವೂ ಭಸ್ಮಮಾಡಿತ್ತು.
ಘಟನೆಯ ಕುರಿತು ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದ್ದು, ಬೆಂಕಿ ತಗುಲಿದ ಹಿನ್ನೆಲೆ ಮತ್ತು ಕಾರಣಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

