Sunday, November 16, 2025

FOOD | ಚನಾ ಚಾಟ್‌: ಸಿಂಪಲ್ & ಟೇಸ್ಟಿ ಸ್ನಾಕ್!

ಚನಾ ಚಾಟ್‌ ಅಂದ್ರೆ ಹೊಟ್ಟೆ ತುಂಬಿಸಿ, ರುಚಿ ಕೊಟ್ಟು, ಆರೋಗ್ಯಕ್ಕೂ ಒಳ್ಳೆಯದು ಮಾಡೋ ಒಂದು ಸ್ನ್ಯಾಕ್. ಈ ಡಿಶ್‌ ಸಂಜೆ ಹೊತ್ತಿಗೆ ತಕ್ಷಣ ತಯಾರಿಸಬಹುದಾದ ಸ್ಪೈಸಿ–ಟ್ಯಾಂಗ್ ಮಿಕ್ಸ್.

ಬೇಕಾಗುವ ಸಾಮಗ್ರಿಗಳು:

ಚನಾ – 1 ಕಪ್ (ರಾತ್ರಿ ನೆನೆಸಿ, ಬೇಯಿಸಿದ್ದು)
ಈರುಳ್ಳಿ – 1
ಟೊಮೇಟೋ – 1
ಹಸಿಮೆಣಸು – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಲಿಂಬೆರಸ – 1–2 ಟೀಸ್ಪೂನ್
ಚಾಟ್ ಮಸಾಲಾ – ½ ಟೀಸ್ಪೂನ್
ಜೀರಿಗೆ ಪುಡಿ – ¼ ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ಚಿಟಿಕೆ
ಉಪ್ಪು – ರುಚಿಗೆ ತಕ್ಕಂತೆ
ಸೆವ್ – ಐಚ್ಛಿಕ
ಗ್ರೀನ್ ಚಟ್ನಿ / ಸಿಹಿ ಚಟ್ನಿ – ಬೇಕಿದ್ದಷ್ಟು

ತಯಾರಿಸುವ ವಿಧಾನ:

ದೊಡ್ಡ ಬೌಲ್ ನಲ್ಲಿ ಬೇಯಿಸಿದ ಚನಾವನ್ನು ಹಾಕಿ. ಮೇಲೆ ಕತ್ತರಿಸಿದ ಈರುಳ್ಳಿ, ಟೊಮೇಟೋ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪು ಹಾಕಿ. ಲಿಂಬೆರಸ, ಚಾಟ್ ಮಸಾಲಾ, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಿದ್ದರೆ ಗ್ರೀನ್ ಚಟ್ನಿ ಅಥವಾ ಸಿಹಿ ಚಟ್ನಿ ಹಾಕಬಹುದು.

error: Content is protected !!