ಮನೆಯಲ್ಲಿನ ಕೆಲವು ಅಲ್ಪ ಪ್ರಮಾಣದ ಅಸಮರ್ಪಕತೆಗಳು ದಿನನಿತ್ಯದ ಜೀವನಕ್ಕೆ ಮಾತ್ರ ಅಲ್ಲ, ಆರ್ಥಿಕ ಸ್ಥಿತಿಗೂ ಪರಿಣಾಮ ಬೀರುತ್ತವೆ ಎಂದು ವಾಸ್ತು ಶಾಸ್ತ್ರ ಸೂಚಿಸುತ್ತದೆ. ಸಾಮಾನ್ಯವಾಗಿ ಗಮನಿಸದೇ ಬಿಡುವ ಈ ಸಣ್ಣ ವಿಷಯಗಳು ನಿಧಾನವಾಗಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಮನೆಯ ಸಮೃದ್ಧಿಯನ್ನು ದುರ್ಬಲಗೊಳಿಸಬಹುದು.
ಒಣಗಿದ ತುಳಸಿ ಗಿಡ: ಮನೆಯಲ್ಲಿ ತುಳಸಿ ಗಿಡ ಇದ್ದರೆ ಅದು ಹಚ್ಚ ಹಸಿರಾಗಿರಬೇಕು. ತುಳಸಿ ಒಣಗುವುದನ್ನು ನಕಾರಾತ್ಮಕ ಸಂಕೇತವಾಗಿ ವಾಸ್ತು ವಿವರಿಸುತ್ತದೆ. ಒಣಗಿದ ತುಳಸಿ ಆರ್ಥಿಕ ಬಿಕ್ಕಟ್ಟನ್ನು ಬರಮಾಡಬಹುದು ಎನ್ನಲಾಗುತ್ತದೆ. ಹೀಗಾಗಿ, ಗಿಡ ಒಣಗಿದರೆ ಅದನ್ನು ಹೊಸ ಗಿಡದಿಂದ ಬದಲಿಸುವುದು ಉತ್ತಮ.
ನಲ್ಲಿಯಿಂದ ನೀರು ಸೋರುವುದು: ಮನೆಯಲ್ಲಿ ಯಾವುದೇ ಟ್ಯಾಪ್ ಆಫ್ ಮಾಡಿದ ಬಳಿಕವೂ ಹನಿ ಹನಿಯಾಗಿ ನೀರು ಹರಿಯುತ್ತಿರೋದನ್ನು ವಾಸ್ತು ದೋಷವೆಂದು ಪರಿಗಣಿಸಲಾಗುತ್ತದೆ. ಹೇಗೆ ನೀರು ಹನಿಹನಿಯಾಗಿ ಹೊರಹೊಮ್ಮುತ್ತದೋ, ಹಾಗೆಯೇ ಮನೆಯ ಹಣಕಾಸೂ ನಿಧಾನವಾಗಿ ವ್ಯರ್ಥವಾಗುತ್ತದೆ ಎಂಬ ನಂಬಿಕೆ ಇದೆ.
ಹಣ ಇಡುವ ಸ್ಥಳ: ವಾಸ್ತು ಪ್ರಕಾರ, ಹಣಕಾಸಿನ ದಾಖಲೆಗಳು, ನಗದು ಅಥವಾ ಮೌಲ್ಯಯುತ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ತೆರೆಯುವ ಬೀರು ಅಥವಾ ಲಾಕರ್‌ನಲ್ಲಿ ಇಡುವುದು ಶುಭ. ಈ ದಿಕ್ಕು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗುತ್ತದೆ.
ಒಡೆದ ಕನ್ನಡಿ: ಮನೆಯಲ್ಲಿ ಒಡೆದ ಕನ್ನಡಿ ಇಡುವುದು ಅಶುಭವೆಂದು ಹೇಳಲಾಗುತ್ತದೆ. ಇವು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ ಮತ್ತು ಮನೆಯ ಸಮೃದ್ಧಿಗೆ ಅಡ್ಡಿಯಾಗಬಹುದು. ಆದ್ದರಿಂದ ಒಡೆದ ಕನ್ನಡಿಗಳನ್ನು ತಕ್ಷಣ ತೆರವುಗೊಳಿಸುವುದು ಉತ್ತಮ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

