ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಲಕನ ನಿಯಂತ್ರಣ ತಪ್ಪಿದ ಭೀಕರ ಘಟನೆಯಲ್ಲಿ, KSRTC ಬಸ್ ರಸ್ತೆ ಪಕ್ಕದ ಹಳ್ಳಕ್ಕೆ ನುಗ್ಗಿ ಪವಾಡಸದೃಶ ರೀತಿಯಲ್ಲಿ ಭಾರೀ ಅನಾಹುತದಿಂದ ಪಾರಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಪೆಟ್ಲೂರು ಕ್ರಾಸ್ ಬಳಿ ಈ ಘಟನೆ ನಡೆದಿದೆ.
ಸವದತ್ತಿಯಿಂದ ಲೋಕಾಪುರ ಮಾರ್ಗವಾಗಿ ನೆರೆಯ ಮಹಾರಾಷ್ಟ್ರದ ಮಿರಜ್ ಕಡೆಗೆ ತೆರಳುತ್ತಿದ್ದ ಬಸ್, ಚಾಲಕನ ಅಜಾಗರೂಕತೆಯಿಂದ ರಸ್ತೆಯಿಂದ ಕೆಳಕ್ಕೆ ಇಳಿದು ಹಳ್ಳಕ್ಕೆ ಇಳಿದು ಪಕ್ಕಕ್ಕೆ ವಾಲಿ ನಿಂತಿದೆ. ಏಕಾಏಕಿ ಸಂಭವಿಸಿದ ಈ ಅನಿರೀಕ್ಷಿತ ಘಟನೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ತೀವ್ರ ಭಯಭೀತರಾಗಿದ್ದರು.
ಬಸ್ ವಾಲಿ ನಿಂತ ಪರಿಣಾಮ, ಪ್ರಯಾಣಿಕರು ಆತಂಕದಿಂದ ಕಿಟಕಿಗಳ ಮೂಲಕ ಹೊರಬಂದು ತಮ್ಮ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದರು. ಅದೃಷ್ಟವಶಾತ್, ಯಾವುದೇ ದೊಡ್ಡ ದುರಂತ ಸಂಭವಿಸಿಲ್ಲ. ಈ ಘಟನೆ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

