ಮಗು ಜನಿಸಿದ ಕ್ಷಣದಿಂದಲೇ ಅದರ ಆರೋಗ್ಯ, ಬೆಳವಣಿಗೆ, ರೋಗನಿರೋಧಕ ಶಕ್ತಿ ಎಲ್ಲವೂ ಆಹಾರಕ್ಕೆ ನೇರವಾಗಿ ಸಂಪರ್ಕ ಹೊಂದಿರುತ್ತವೆ. ವಿಶೇಷವಾಗಿ ಮೊದಲ 12 ತಿಂಗಳಲ್ಲಿ ತಾಯಿಹಾಲು ಮಗುವಿಗೆ ಅತ್ಯುತ್ತಮ ಆಹಾರ. ಆದರೆ ಕೆಲವೆ ಸಂದರ್ಭಗಳಲ್ಲಿ ತಾಯಿಹಾಲು ಕಡಿಮೆಯಾಗಬಹುದು, ಆದ್ದರಿಂದ ಕೆಲವರು ಹಸುವಿನ ಹಾಲು ಕೊಡಲು ಯೋಚಿಸುತ್ತಾರೆ. ಆದರೆ ಇದು ಮಗುವಿನ ಆರೋಗ್ಯಕ್ಕೆ ಸುರಕ್ಷಿತವೇ? ಅದೇ ಬಗ್ಗೆ ಇಲ್ಲಿ ಸ್ಪಷ್ಟ ಮಾಹಿತಿ.
- ಹಸುವಿನ ಹಾಲಿನಲ್ಲಿ ಅಗತ್ಯ ಪೋಷಕಾಂಶಗಳ ಕೊರತೆ: ಒಂದು ವರ್ಷದೊಳಗಿನ ಮಗುವಿಗೆ ಬೇಕಾಗಿರುವ ಕಬ್ಬಿಣ, ವಿಟಮಿನ್ E, A, C ಮತ್ತು ಅಗತ್ಯ ಕೊಬ್ಬಿನಾಮ್ಲಗಳು ಹಸುವಿನ ಹಾಲಿನಲ್ಲಿ ಸಾಕಷ್ಟು ಇರುವುದಿಲ್ಲ. ಇದರಿಂದ ಮಗುವಿನಲ್ಲಿ ರಕ್ತಹೀನತೆ ಹಾಗೂ ಬೆಳವಣಿಗೆ ಕುಂಠಿತವಾಗಬಹುದು.
- ಜೀರ್ಣಾಂಗದ ಮೇಲೆ ಹೆಚ್ಚು ಒತ್ತಡ: ಹಸುವಿನ ಹಾಲಿನಲ್ಲಿ ಪ್ರೋಟೀನ್, ಸೋಡಿಯಂ ಮತ್ತು ಪೊಟ್ಯಾಸಿಯಮ್ ಅಧಿಕ. ಈ ಅಂಶಗಳನ್ನು ಶಿಶುವಿನ ಮೂತ್ರಪಿಂಡಗಳು ಜೀರ್ಣಿಸಲು ಇನ್ನೂ ಸಾಕಷ್ಟು ಬಲವಾಗಿರುವುದಿಲ್ಲ. ಇದರಿಂದ ಜೀರ್ಣಕ್ರಿಯೆ ಹದಗೆಡಬಹುದು.
- ಸೋಂಕಿನ ಅಪಾಯ ಹೆಚ್ಚಳ: ಹಸುವಿನ ಹಾಲಿನ ಸೂಕ್ಷ್ಮ ಪ್ರೋಟೀನ್‌ಗಳು ಹೊಟ್ಟೆ–ಕರುಳಿನ ಒಳಪದರವನ್ನು ಕೆರಳಿಸಬಹುದು. ಇದರಿಂದ ಮುಖಾಂತರ ರಕ್ತಸ್ರಾವ, ಕಬ್ಬಿಣದ ಕೊರತೆ, ಅಜೀರ್ಣ ಉಂಟಾಗುವ ಸಾಧ್ಯತೆ ಇದೆ.
- ಬೊಜ್ಜು ಹಾಗೂ ಅತಿಯಾಗಿ ತೂಕ ಹೆಚ್ಚುವಿಕೆ: ಹಸುವಿನ ಹಾಲಿನಲ್ಲಿ ಫಾಸ್ಫೇಟ್ ಮತ್ತು ಪ್ರೋಟೀನ್ ಪ್ರಮಾಣ ಜಾಸ್ತಿಯಾಗಿರುವುದರಿಂದ ಶಿಶುಗಳಲ್ಲಿ ತೂಕ ಅತಿಯಾಗಿ ಹೆಚ್ಚುವಿಕೆ ಸಂಭವಿಸಬಹುದು.
ಹಾಲು ಯಾವಾಗ ಕೊಡಬಹುದು?
1 ವರ್ಷದ ನಂತರ ಮಾತ್ರ ಹಸುವಿನ ಹಾಲು ಕೊಡಬಹುದು. ಆದರೆ ತಾಯಿಹಾಲು ಬರದಿದ್ದರೆ ವೈದ್ಯರ ಸಲಹೆಯ ಮೇರೆಗೆ ಫಾರ್ಮುಲಾ ಹಾಲು ಸುರಕ್ಷಿತ ಆಯ್ಕೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

