ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಘೋಪುರ್‌ನ ಆರ್‌ಜೆಡಿ ಶಾಸಕ ತೇಜಸ್ವಿ ಯಾದವ್ ಆಯ್ಕೆಯಾಗಿದ್ದಾರೆ.
ಇಂದು ನಡೆದ ಲೆಜಿಸ್ಲೇಟೀವ್ ಸಭೆಯಲ್ಲಿ ಆರ್‌ಜೆಡಿ ಶಾಸಕರು ತೇಜಸ್ವಿ ಯಾದವ್‌ನನ್ನು ಲೇಜಿಸ್‌ಸೇಚರ್ ಪಾರ್ಟಿ ಲೀಡರ್ ಎಂದು ಆಯ್ಕೆ ಮಾಡಿದ್ದಾರೆ. ಇದೀಗ ಆರ್‌ಜೆಡಿಗೆ ವಿರೋಧ ಪಕ್ಷ ನಾಯಕನಾಗಿ ಮುನ್ನಡೆಸುವಷ್ಟು ಸ್ಥಾನ ಇದೆಯಾ ಅನ್ನೋ ಚರ್ಚೆ ಶುರುವಾಗಿದೆ.
ಬಿಹಾರದ ವಿಧಾನಭೆಯಲ್ಲಿ ಒಟ್ಟ 234 ಸ್ಥಾನಗಳಿವೆ. ಈ ಪೈಕಿ ಮಹಾಘಟಂಬದನ್ ಸೀಟು ಹಂಚಿಕೆಯಲ್ಲಿ ಗರಿಷ್ಠ ಪಾಲನ್ನು ಆರ್‌ಜೆಡಿ ಪಡೆದುಕೊಂಡಿತ್ತು. ಒಟ್ಟು 143 ಕ್ಷೇತ್ರದಲ್ಲಿ ಆರ್‌ಜೆಡಿ ಸ್ಪರ್ಧಿಸಿತ್ತು. ಈ ಪೈಕಿ 25 ಸ್ಥಾನ ಗೆದ್ದುಕೊಂಡಿದೆ. ಇಂದು ಮಹತ್ವದ ಸಭೆಯಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ, ಮಿಸಾ ಭಾರತಿ ಸೇರಿದಂತೆ ಹಲವು ಆರ್‌ಜೆಡಿ ಪ್ರಮುಖರು ಉಪಸ್ಥಿತರಿದ್ದರು.
ವಿಧಾನಸಭಾ ನಿಯಮಾವಳಿಗಳ ಪ್ರಕಾರ ವಿರೋಧ ಪಕ್ಷ ನಾಯಕನಾಗಲು ಒಟ್ಟು ವಿಧಾನಸಭಾ ಸ್ಥಾನಗಳ ಪೈಕಿ ಶೇಕಡಾ 10 ರಷ್ಟು ಸ್ಥಾನ ಗೆದ್ದಿರಬೇಕು. ಇದೀಗ ಬಿಹಾರ ವಿಧಾನಸಭೆಯಲ್ಲಿ 243 ಸ್ಥಾನಗಳಿವೆ. ಇದರಲ್ಲಿ ಶೇಕಡಾ 10 ಎಂದರೆ ವಿರೋದ ಪಕ್ಷ ನಾಯಕನಾಗಲು ಕನಿಷ್ಠ 24 ಸ್ಥಾನ ಗೆದ್ದಿರಬೇಕು. ಹೀಗಾಗಿ ಆರ್‌ಜೆಡಿ ಪಕ್ಷ 25 ಸ್ಥಾನ ಗೆದ್ದಿದೆ. ಈಗಾಗಲೇ ಆರ್‌ಜೆಡಿ ಶಾಸಕರು ತಮ್ಮ ನಾಯಕನಾಗಿ ತೇಜಸ್ವಿ ಯಾದವ್ ಅವರನ್ನು ಆಯ್ಕೆ ಮಾಡಿದೆ. ಹೀಗಾಗಿ ವಿಧಾನಸಭೆಯಲ್ಲಿ ತೇಜಸ್ವಿ ಯಾದವ್‌ಗೆ ವಿರೋಧ ಪಕ್ಷದ ನಾಯಕನಾಗಲು ಎಲ್ಲಾ ಅರ್ಹತೆ ಇದೆ.

