Wednesday, November 19, 2025

ಬಿಗ್‌ ಬಾಸ್‌ | ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು: ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:


ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಸಖತ್‌ ಆಕ್ಟಿವ್‌, ತಮಾಷೆ ಮಾಡುತ್ತಾ ಇರುವ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.

ರಿಷಾ ಬಟ್ಟೆಗಳನ್ನು ಬಾತ್‌ರೂಮ್‌ನಲ್ಲಿ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ, ದೂರು ದಾಖಲಾಗಿದೆ.

ಈ ಹಿಂದೆ ಬಿಗ್‌ ಬಾಸ್‌ ಮನೆಯಲ್ಲಿ ರಿಷಾ ಹಾಗೂ ಗಿಲ್ಲಿ ನಡುವೆ ಬಕೆಟ್‌ ವಿಚಾರಕ್ಕೆ ಜಗಳ ತಾರಕ್ಕೇರಿತ್ತು. ಮೊದಲಿಗೆ ಬಕೆಟ್‌ ವಿಚಾರಕ್ಕೆ ಗಿಲ್ಲಿ, ರಿಷಾ ಅವರ ಬಳಿ ಕೇಳಿದ್ದರು. ಬಕೆಟ್‌ವನ್ನು ಕೊಡದೇ ಇರದ ಕಾರಣ ಗಿಲ್ಲಿ ಅವರು ಬಾತ್‌ ರೂಮ್‌ ಏರಿಯಾದಲ್ಲಿ ರಿಷಾ ಅವರ ಬಟ್ಟೆಗಳನ್ನು ಹಾಕುತ್ತಾರೆ.

ಬಾತ್‌ರೂಮ್‌ನಿಂದ ಬಂದ ರಿಷಾ ರೊಚ್ಚಿಗೆದ್ದು ಕೂಗಿ, ಗಿಲ್ಲಿಗೆ ಹೊಡೆಯುತ್ತಾರೆ. ಬಟ್ಟೆ ತಂದು ಬಾತ್‌ ರೂಮ್‌ ಬಳಿ ಇಟ್ಟಿರೋದು ತಮಾಷೆನಾ? ಎಂದು ಗಿಲ್ಲಿ ಅವರನ್ನು ತಳ್ಳಿದ್ದರು.

ಈ ದೂರಿನ ಅನ್ವಯ ಮಹಿಳಾ ಆಯೋಗವು ವಿಡಿಯೋ ಫೂಟೇಜ್ ಪರಿಶೀಲನೆ ಮಾಡುತ್ತಿದೆ. ಆದರೆ ಬಿಗ್ ಬಾಸ್ ಆಯೋಜಕರು ಯಾವುದೇ ವಿಡಿಯೋ ಫೂಟೇಜ್ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಮೇಲ್ನೋಟಕ್ಕೆ ಗಿಲ್ಲಿ ನಟ ತಪ್ಪಾಗಿ ನಡೆದುಕೊಂಡ ಬಗ್ಗೆ ಯಾವುದೇ ಸಾಕ್ಷಿ ಸಿಗದ ಕಾರಣಕ್ಕೆ ಈ ಪ್ರಕರಣವನ್ನು ಆಯೋಗದ ಲೀಗಲ್ ಟೀಮ್ ಅಭಿಪ್ರಾಯಕ್ಕೆ ಕಳಿಸಲಾಗಿದೆ.

ಜಗಳ ನಡೆದಾಗ ಗಿಲ್ಲಿ ಮೇಲೆ ರಿಷಾ ಅವರು ಕೈ ಮಾಡಿದ್ದರು. ಅದು ಬಿಗ್ ಬಾಸ್ ಮನೆಯ ಮೂಲ ನಿಯಮದ ಉಲ್ಲಂಘನೆ. ಆದರೂ ಕೂಡ ಇನ್ನುಳಿದ ಸ್ಪರ್ಧಿಗಳು ಕೇವಲ ವಾರ್ನಿಂಗ್ ನೀಡಿ ರಿಷಾ ಅವರನ್ನು ಉಳಿಸಿಕೊಂಡರು. ವಾರಾಂತ್ಯದ ಸಂಚಿಕೆಯಲ್ಲಿ ಈ ವಿಚಾರದ ಬಗ್ಗೆ ಸುದೀಪ್ ಕೂಡ ಮಾತನಾಡಿದ್ದರು. ಹೆಣ್ಮಕ್ಕಳ ಬಟ್ಟೆ, ಬ್ಯಾಗ್​​ಗಳಿಗೆ ಅನುಮತಿ ಇಲ್ಲದೇ ಕೈ ಹಾಕಬಾರದು ಎಂದು ಗಿಲ್ಲಿಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು.

error: Content is protected !!