ಕಾಂತಿಯುತ ತ್ವಚೆಗಾಗಿ ಹಲವರು ಮಾರುಕಟ್ಟೆಯ ದುಬಾರಿ ಸ್ಕಿನ್ ಕೇರ್ ಉತ್ಪನ್ನಗಳ ಮೇಲೆ ಅವಲಂಬಿತರಾಗುತ್ತಾರೆ. ಆದರೆ ಇಂತಹ ಉತ್ಪನ್ನಗಳು ತಾತ್ಕಾಲಿಕ ಗ್ಲೋ ನೀಡಿದರೂ, ಕೆಲವು ದಿನಗಳಲ್ಲಿ ಮತ್ತೆ ಚರ್ಮ ನಿರ್ಜೀವವಾಗುತ್ತದೆ. ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಫೇಸ್ ಪ್ಯಾಕ್‌ಗಳು ಚರ್ಮವನ್ನು ಆಳವಾಗಿ ಪೋಷಿಸಿ, ಸಮಸ್ಯೆಗಳನ್ನು ಶಾಶ್ವತವಾಗಿ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ.
ಕಡಲೆಹಿಟ್ಟು–ಮೊಸರಿನ ಫೇಸ್ ಪ್ಯಾಕ್: ಕಡಲೆಹಿಟ್ಟು ಮತ್ತು ಮೊಸರನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟರೆ ಚರ್ಮದ ಕಲೆ, ಅಸಮತೋಲನತೆ ಕಡಿಮೆವಾಗಿ ತಕ್ಷಣ ಕಾಂತಿ ಮೂಡುತ್ತದೆ. ಕಳೆಗುಂದಿದ ತ್ವಚೆಗೆ ಇದು ಉತ್ತಮ ಕ್ಲೀನ್ಸರ್ ಆಗಿ ಕೆಲಸ ಮಾಡುತ್ತದೆ.
ಅರಿಶಿನ–ಜೇನುತುಪ್ಪ ಪ್ಯಾಕ್: ಅರಿಶಿನದ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣ ಮತ್ತು ಜೇನುತುಪ್ಪದ ಹೈಡ್ರೇಷನ್ ಚರ್ಮವನ್ನು ಮೃದುವಾಗಿಸಿ ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ವಾರದಲ್ಲಿ 2 ಬಾರಿ ಹಚ್ಚಿದರೆ ಉತ್ತಮ ಫಲಿತಾಂಶ.
ರೋಸ್ ವಾಟರ್–ಚಂದನ ಪ್ಯಾಕ್: ರೋಸ್ ವಾಟರ್‌ಗೆ ಚಂದನ ಪೌಡರ್ ಸೇರಿಸಿ ಮುಖಕ್ಕೆ ಹಚ್ಚಿದರೆ ತ್ವಚೆಗೆ ತಂಪು, ಮೊಡವೆ ನಿವಾರಣೆ ಹಾಗೂ ಡೆಡ್ ಸ್ಕಿನ್ ತೆಗೆಯುತ್ತದೆ. ಇದು ಚರ್ಮವನ್ನು ಆಳವಾಗಿ ಕ್ಲೀನ್ ಮಾಡಿ ಸಹಜ ಗ್ಲೋ ನೀಡುತ್ತದೆ.

