ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಮಿನಿ ಹರಾಜು ಸಮೀಪಿಸುತ್ತಿರುವ ಸಂದರ್ಭದಲ್ಲಿ, ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ಮುಂದಿನ ಸೀಸನ್‌ಗಾಗಿ ಮುಖ್ಯ ಕೋಚ್‌ಗಳನ್ನು ಅಂತಿಮಗೊಳಿಸಿವೆ. ವಿಶೇಷವಾಗಿದ್ದು, ಈ ಪಟ್ಟಿಯಲ್ಲಿ ಕೇವಲ ಮೂವರು ಭಾರತೀಯರು ಮಾತ್ರ ಪ್ರಧಾನ ಕೋಚ್ ಹುದ್ದೆಯನ್ನು ಅಲಂಕರಿಸಿದ್ದಾರೆ. ಉಳಿದಂತೆ ವಿದೇಶಿ ದಿಗ್ಗಜರು ತಮ್ಮ ಅನುಭವದೊಂದಿಗೆ ತಂಡಗಳಿಗೆ ದಿಕ್ಕು ತೋರಲು ಸನ್ನದ್ಧರಾಗಿದ್ದಾರೆ.
ಮುಂಬೈ ಇಂಡಿಯನ್ಸ್ ಮಹೇಂದ್ರ ಜಯವರ್ಧನರನ್ನು ಮುಂದುವರೆಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಸ್ಟೀಫನ್ ಫ್ಲೆಮಿಂಗ್ ಮೇಲೆಯೇ ನಂಬಿಕೆ ಇಟ್ಟಿದೆ. ಸನ್‌ರೈಸರ್ಸ್ ಹೈದರಾಬಾದ್ ಡೇನಿಯಲ್ ವೆಟ್ಟೋರಿಗೆ ಹೊಣೆಗಾರಿಕೆಯನ್ನು ನೀಡಿದೆ. ಗುಜರಾತ್ ಟೈಟಾನ್ಸ್ ಆಶಿಶ್ ನೆಹ್ರಾರನ್ನು ಕಾಯಂ ಆಗಿಸಿದ್ದು, ಲಕ್ನೋ ಸೂಪರ್ ಜೈಂಟ್ಸ್ ಹೊಸ ಕೋಚ್ ಆಗಿ ಜಸ್ಟಿನ್ ಲ್ಯಾಂಗರ್ ಅವರನ್ನು ಆಯ್ಕೆ ಮಾಡಿದೆ.
ರಾಜಸ್ಥಾನ್ ರಾಯಲ್ಸ್ ಈ ಬಾರಿ ಕುಮಾರ್ ಸಂಗಾಕ್ಕರ ಬಲವನ್ನು ಬಳಸಿಕೊಳ್ಳಲಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಚಂದ್ರಕಾಂತ್ ಪಂಡಿತ್ ಬದಲಿಗೆ ಅಭಿಷೇಕ್ ನಾಯರ್‌ರನ್ನು ಮುಖ್ಯಸ್ಥನನ್ನಾಗಿ ನೇಮಕ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಹೆಮಾಂಗ್ ಬದಾನಿಯನ್ನು ಮತ್ತೊಮ್ಮೆ ಮುಂದುವರೆಸಿದೆ. ಪಂಜಾಬ್ ಕಿಂಗ್ಸ್ ರಿಕಿ ಪಾಂಟಿಂಗ್‌ಗೂ ಮುಂದುವರಿದ ಅವಕಾಶ ನೀಡಿದ್ದು, ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಆ್ಯಂಡಿ ಫ್ಲವರ್‌ರನ್ನು ಹೆಡ್ ಕೋಚ್ ಆಗಿ ಆಯ್ಕೆ ಮಾಡಿದ್ದಾರೆ.
ಎಲ್ಲಾ ತಂಡಗಳೂ ತಮ್ಮ ಪ್ರಯೋಗಶೀಲತೆ ಮತ್ತು ಸಾಧನೆಗಳನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನಗಳನ್ನು ಕೈಗೊಂಡಿದೆ.

