Wednesday, November 19, 2025

ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಅಮೆರಿಕದಿಂದ ಗಡೀಪಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:


ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ , ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಸಹೋದರ, ನಮೋಲ್ ಬಿಷ್ಣೋಯ್ ಗಡಿಪಾರು ಆಗುವ ಸಾಧ್ಯತೆ ದಟ್ಟವಾಗಿದೆ.

ಅಮೆರಿಕಾದ ಗೃಹ ಇಲಾಖೆ, ಸಿದ್ದಿಕ್ ಅವರ ಪುತ್ರ ಜೀಶಾನ್ ಸಿದ್ದಿಕ್‌ಗೆ ಇಮೇಲ್ ಮೂಲಕ ಈ ವಿಷಯವನ್ನು ಖಚಿತಪಡಿಸಿದೆ. ಅನಮೋಲ್ ಬಿಷ್ಣೋಯ್‌ರನ್ನು ಅಮೆರಿಕಾದಿಂದ ಫೆಡರಲ್ ಸರ್ಕಾರ ಗಡಿಪಾರು ಮಾಡಿದೆ.

ಕಳೆದ ವರ್ಷ ಅನಮೋಲ್‌ನನ್ನು ಕ್ಯಾಲಿಫೋರ್ನಿಯಾದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.

ಅನಮೋಲ್ ಬಿಷ್ಣೋಯ್ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಕಿರಿಯ ಸಹೋದರ. ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿಯೇ ಇದ್ದರೂ ಜಾಗತಿಕ ಕ್ರಿಮಿನಲ್ ಜಾಲವನ್ನು ನಡೆಸುತ್ತಿದ್ದಾನೆ ಎಂಬ ಆರೋಪವಿದೆ. ರಾಷ್ಟ್ರೀಯ ತನಿಖಾ ದಳ (NIA) ದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಅನಮೋಲ್ ಸ್ಥಾನ ಪಡೆದಿದ್ದು, ಅವನ ಮಾಹಿತಿಯನ್ನು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.

ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದಲ್ಲಿ, ಮೂವರು ಶೂಟರ್‌ಗಳು ಅನಮೋಲ್‌ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ, ಅನಮೋಲ್ ಹತ್ಯೆಯನ್ನು ಸಂಚು ರೂಪಿಸಿದ್ದಾನೆ ಎಂದು ಹೆಸರಿಸಲಾಗಿದ್ದು, ಅವನನ್ನು ಬೇಕಾಗಿರುವ ಆರೋಪಿ ಎಂದು ಕರೆಯಲಾಗಿದೆ. ಆರೋಪಿಗಳಾದ ರಾಮ್‌ಫೂಲ್ ಕಂಜೋಯಾ ಮತ್ತು ನಿತಿನ್ ಸಪ್ರೆ, ಅನಮೋಲ್ ಹತ್ಯೆಯನ್ನು ಸಂಘಟಿಸಿದ್ದಾನೆ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

error: Content is protected !!