ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜೆಡಿಯು (JDU) ಪ್ರತ್ಯೇಕ ಸಭೆಯ ನಂತರ ವಿಜಯ್ ಚೌಧರಿ, ಸಂಜಯ್ ಝಾ ಅವರೊಂದಿಗೆ ನಿತೀಶ್ ಕುಮಾರ್ ಎನ್ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಎನ್ಡಿಎ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು.
ನಿತೀಶ್ ಕುಮಾರ್ ನಾಳೆ (ಗುರುವಾರ) ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ದಾಖಲೆಯ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್ಡಿಎ ನಾಯಕನ ಆಯ್ಕೆ ಪ್ರಸ್ತಾವನೆಯನ್ನು ಜೆಡಿಯುನ ವಿಜಯ್ ಚೌಧರಿ ಮಂಡಿಸಿದರು. ಬಿಜೆಪಿ ನಾಯಕರಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ, ಎಲ್ಜೆಪಿ (ಆರ್ವಿ), ಎಚ್ಎಎಂ ಮತ್ತು ಆರ್ಎಲ್ಎಂ ಶಾಸಕರೂ ಅನುಮೋದಿಸಿದರು ಎಂದು ಮಾಹಿತಿ ನೀಡಿದರು.
ಇದಕ್ಕೂ ಮೊದಲು ಜೆಡಿಯು ಶಾಸಕರು, ನಿತೀಶ್ ಕುಮಾರ್ ಅವರನ್ನು ಜೆಡಿಯು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದರು.

