January15, 2026
Thursday, January 15, 2026
spot_img

ಸೋನಂ ಕಪೂರ್ ಮತ್ತೆ ತಾಯಿಯಾಗ್ತಿದ್ದಾರಂತೆ: ಸೆಕೆಂಡ್ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಕಪೂರ್ ಕುಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ ಫ್ಯಾಷನ್ ಐಕಾನ್ ಸೋನಂ ಕಪೂರ್ ತಮ್ಮ ಎರಡನೇ ಗರ್ಭಧಾರಣೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇಂದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ವಿಶೇಷ ಫೋಟೋಗಳ ಮೂಲಕ ಸೋನಂ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

ಪಿಂಕ್ ಕಲರ್‌ನ ವೂಲ್ ಸೂಟ್ ಧರಿಸಿದ ಸೋನಂ, ತಮ್ಮ ಬೇಬಿ ಬಂಪ್ ತೋರುತ್ತಾ ‘ತಾಯಿ’ ಎಂಬ ಒಂದೇ ಪದದ ಕ್ಯಾಪ್ಶನ್ ಮೂಲಕ ಸುದ್ದಿಯನ್ನು ಹಂಚಿಕೊಂಡರು.

ಈ ಫೋಟೋಶೂಟ್‌ನಲ್ಲಿ ಸೋನಂ ಆಯ್ಕೆ ಮಾಡಿಕೊಂಡ ಉಡುಪು ವಿಶೇಷ ಗಮನಸೆಳೆಯಿತು. 1988ರ ರಾಜಕುಮಾರಿ ಡಯಾನಾ ಧರಿಸಿದ್ದ ವಿಂಟೇಜ್ ಎಸ್ಕಾಡಾ ಗುಲಾಬಿ ಸೂಟ್‌ಗೆ ಹೋಲಿಕೆಯಿರುವ ಈ ಹಾಟ್-ಪಿಂಕ್ outfit ಸೋನಂ ಅವರ ಕ್ಲಾಸಿಕ್ ಫ್ಯಾಷನ್ ಸೆನ್ಸ್ ಅನ್ನು ಮತ್ತೊಮ್ಮೆ ತೋರಿಸಿದೆ.

2022ರಲ್ಲಿ ಮೊದಲ ಮಗುವನ್ನು ಸ್ವಾಗತಿಸಿದ ಸೋನಂ ಮತ್ತು ಅವರ ಪತಿ ಆನಂದ್ ಅಹುಜಾ, ತಮ್ಮ ವೈಯಕ್ತಿಕ ಜೀವನದ ಮತ್ತೊಂದು ಮೈಲಿಗಲ್ಲನ್ನು ಸ್ಟೈಲಿಷ್ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಪ್ರಸ್ತುತ ಲಂಡನ್ ಮತ್ತು ಮುಂಬೈ ನಡುವೆ ಸಂಚರಿಸುತ್ತಿರುವ ಸೋನಂ, ಫ್ಯಾಷನ್, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್ ಮತ್ತು ಸಿಲ್ವರ್ ಸ್ಕ್ರೀನ್ ಯೋಜನೆಗಳನ್ನು ಸಮತೋಲನಗೊಳಿಸುತ್ತಿದ್ದಾರೆ.

Most Read

error: Content is protected !!