Friday, November 21, 2025

ವಾಹನ ಸವಾರರಿಗೆ ಮತ್ತೆ ಗುಡ್ ನ್ಯೂಸ್: ಮತ್ತೆ ಶೇ.50ರಷ್ಟು ರಿಯಾಯಿತಿಯಲ್ಲಿ ಟ್ರಾಫಿಕ್ ದಂಡ ಪಾವತಿಗೆ ಅವಕಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ವಾಹನ ಸವಾರರಿಗೆ ಮತ್ತೆ ಸಾರಿಗೆ ಇಲಾಖೆಯಿಂದ ಗುಡ್ ನ್ಯೂಸ್ ನೀಡಲಾಗಿದೆ.ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಮತ್ತೆ ಶೇ.50ರಷ್ಟು ದಂಡ ಪಾವತಿಗೆ ಡಿಸೆಂಬರ್.12ರವರೆಗೆ ಕಾಲಾವಕಾಶ ನೀಡಲಾಗಿದೆ.

ಈ ಕುರಿತಂತೆ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅವರು ಆದೇಶ ಹೊರಡಿಸಿದ್ದಾರೆ. ಶೇ.50ರಷ್ಟು ದಂಡ ಪಾವತಿಗೆ ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ಅವಧಿ ವಿಸ್ತರಿಸಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.

ನಾಳೆಯಿಂದ ಡಿಸೆಂಬರ್ 12ರವರೆಗೆ ಶೇ.50ರಷ್ಟು ದಂಡ ಕಟ್ಟಲು ಅವಕಾಶ ನೀಡಲಾಗಿದೆ. ದಂಡದ ಮೊತ್ತ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಆದೇಶಿಸಿದ್ದಾರೆ.

error: Content is protected !!