Friday, November 21, 2025

ಧರ್ಮಸ್ಥಳ ತಲೆಬುರುಡೆ ಕೇಸ್: ಎಸ್ಐಟಿಯಿಂದ ಕೋರ್ಟ್ ಗೆ ತನಿಖಾ ವರದಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳ ತಲೆಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ (SIT) ತಂಡ, ಇದೀಗ ಬೆಳ್ತಂಗಡಿ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದೆ.

‘ಸುಳ್ಳು ಸಾಕ್ಷಿ’ ನೀಡಿರುವ ಬಗ್ಗೆ ವರದಿಯನ್ನು 215 ಅಡಿಯಲ್ಲಿ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಎಚ್.ಟಿ ಅವರ ಮುಂದೆ ಇಂದು ಮಧ್ಯಾಹ್ನ SIT ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ಅವರ ತಂಡ ತನಿಖಾ ವರದಿ ಸಲ್ಲಿಕೆ ಮಾಡಿದ್ದಾರೆ.

ವರದಿಯಲ್ಲಿ ಬುರುಡೆ ಮ್ಯಾನ್ ಚಿನ್ನಯ್ಯ ಸೇರಿ 6 ಜನರ ವಿರುದ್ಧ ಎಸ್ಐಟಿ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ. ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್, ವಿಠಲ್ ಗೌಡ ಹಾಗೂ ಜಯಂತ್ ಟಿ ಹೆಸರು ಉಲ್ಲೇಖಿಸಲಾಗಿದೆ.

ಧರ್ಮಸ್ಥಳ ತಲೆ ಬುರುಡೆ ಕೇಸ್‌ನ ತನಿಖೆ ನಡೆಸುತ್ತಿದ್ದ ಎಸ್ಐಟಿ, ಇದೀಗ ತನಿಖಾ ವರದಿಯನ್ನು ಬೆಳ್ತಂಗಡಿ ಕೋರ್ಟ್‌ಗೆ ಸಲ್ಲಿಸಿದೆ. BNSS 215ರ ಅಡಿಯಲ್ಲಿ ಸುಳ್ಳು ಸಾಕ್ಷ್ಯದ ಕುರಿತ ಪ್ರಕರಣದ ತನಿಖಾ ವರದಿಯಾಗಿದ್ದು, ಸುಮಾರು 3,923 ಪುಟಗಳ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ.

error: Content is protected !!