January15, 2026
Thursday, January 15, 2026
spot_img

ಗುಳಿ ಕೆನ್ನೆ ಚೆಲುವೆಯರೇ ಇಲ್ಲಿ ಕೇಳಿ! ಡಿಂಪಲ್ ಅದೃಷ್ಟ ಅಲ್ಲ, ಆರೋಗ್ಯ ಸಮಸ್ಯೆ: ಶಾಕ್ ಆಗ್ಬೇಡಿ ಈ ಸ್ಟೋರಿ ಓದಿ

ನಗುವಾಗ ಕೆನ್ನೆಯ ಮೇಲೆ ಮೂಡುವ ಆ ಸಣ್ಣ ಗುಳಿ ಎಲ್ಲರಿಗೂ ಸಿಗುವ ವರವಲ್ಲ. ಬಾಲಿವುಡ್ ನಟಿ ಪ್ರೀತಿ ಝಿಂಟಾ, ನಮ್ಮ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್‌ ಇವರ ನಗು ಮುಖದ ಡಿಂಪಲ್‌ಗಳು ಅವರನ್ನು ಇನ್ನಷ್ಟು ಆಕರ್ಷಕವಾಗಿ ತೋರಿಸುತ್ತವೆ. ಕೆಲವರು ಇದನ್ನು ಸೌಂದರ್ಯ ಅಥವಾ ಅದೃಷ್ಟದ ಸಂಕೇತವೆಂದು ನಂಬುವರು ಇದ್ದಾರೆ. ಆದರೆ ಡಿಂಪಲ್‌ಗಳ ಹುಟ್ಟಿನ ಹಿಂದಿರುವುದು ವೈಜ್ಞಾನಿಕ ಕಾರಣ, ಧಾರ್ಮಿಕ ನಂಬಿಕೆಗಳಲ್ಲ. ಡಿಂಪಲ್‌ ನ ನಿಜವಾದ ಕಾರಣ ತಿಳಿದುಕೊಳ್ಳಿ.

ಡಿಂಪಲ್ ಹೇಗೆ ರಚನೆಯಾಗುತ್ತದೆ?

ಡಿಂಪಲ್ ಹುಟ್ಟಲು ಮುಖ್ಯ ಕಾರಣ ನಮ್ಮ ಮುಖದಲ್ಲಿರುವ ಜೈಗೋಮ್ಯಾಟಿಕಸ್ (Zygomaticus ) ಎಂಬ ಸ್ನಾಯು. ಕೆಲವರಿಗೆ ಈ ಸ್ನಾಯು ಎರಡು ಭಾಗಗಳಾಗಿ ವಿಭಜನೆಯಾಗುತ್ತದೆ. ನಗುವಾಗ ಈ ವಿಭಜನೆ ಕೆನ್ನೆಯ ಮೇಲೆ ಒಳಮುಖ ಒತ್ತಡವನ್ನು ಸೃಷ್ಟಿಸಿ ಸಣ್ಣ ಗುಳಿಯಂತೆ ಕಾಣಿಸುತ್ತದೆ. ಇದೊಂದು ಸೌಂದರ್ಯದ ಗುರುತು ಅಲ್ಲ, ಬದಲಿಗೆ ಸ್ನಾಯುಗಳ ರಚನೆಯಲ್ಲಿ ಕಾಣುವ ವ್ಯತ್ಯಾಸ ಅಷ್ಟೇ.

ಭ್ರೂಣದ ಬೆಳವಣಿಗೆಯ ಸಮಯದಲ್ಲಿ ದವಡೆಯ ಮೂಳೆ ಸಂಪೂರ್ಣವಾಗಿ ಬೆಸೆಯದಿರುವುದರಿಂದಲೂ ಈ ಗುಳಿ ಮೂಡಬಹುದು ಎನ್ನುತ್ತಾರೆ ತಜ್ಞರು. ಇದನ್ನು ಆನುವಂಶಿಕವಾಗಿಯೂ ಪಡೆಯಬಹುದು.

ಆರೋಗ್ಯದ ಮೇಲೆ ಯಾವುದೇ ಪರಿಣಾಮವಿದೆಯೇ?

ಡಿಂಪಲ್‌ಗಳು ವೈದ್ಯಕೀಯ ದೃಷ್ಟಿಯಿಂದ ಅಪಾಯಕಾರಿ ಅಲ್ಲ. ಈ ಸ್ನಾಯು ವ್ಯತ್ಯಾಸ ದೇಹಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಕೆಲವರಿಗೆ ಇದು ಬಾಲ್ಯದಿಂದಲೇ ಸ್ಪಷ್ಟವಾಗಿ ಕಾಣಬಹುದು, ಕೆಲವರಿಗೆ ನಂತರದ ವಯಸ್ಸಿನಲ್ಲಿ ಗೋಚರಿಸಬಹುದು. ಡಿಂಪಲ್‌ಗಳಿರುವುದು ಆರೋಗ್ಯ ಸಮಸ್ಯೆಯಲ್ಲ; ಇದು ಸಂಪೂರ್ಣ ಸಹಜ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

Most Read

error: Content is protected !!