ಸಂಜೆ ಟೀ ಜೊತೆ ತಿನ್ನೋಕ್ಕೆ ಕ್ರಿಸ್ಪಿ ಹಾಗೂ ಬೇಗ ತಯಾರಾಗುವ ಸ್ನ್ಯಾಕ್ ಬೇಕಂದ್ರೆ ಹ್ಯಾಶ್ ಬ್ರೌನ್ ಪರ್ಫೆಕ್ಟ್ ಆಯ್ಕೆ! ಹೊರಗೆ ಕ್ರಿಸ್ಪಿ ಒಳಗೆ ಮೃದುವಾಗಿರೋ ಈ ಆಲೂಗಡ್ಡೆ ಸ್ನ್ಯಾಕ್ ಮನೆ ಮಕ್ಕಳಿಂದ ಹಿಡಿದು ದೊಡ್ಡವರು ಇಷ್ಟಪಟ್ಟು ತಿಂತಾರೆ.
ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 3
ಗೋಧಿಹಿಟ್ಟು/ಮೈದಾ – 1 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸಿನಪುಡಿ – ½ ಟೀ ಸ್ಪೂನ್
ಕರಿ ಮೆಣಸು – ¼ ಟೀ ಸ್ಪೂನ್
ಎಣ್ಣೆ – ಕರಿಯಲು
ತಯಾರಿಸುವ ವಿಧಾನ:
ಆಲೂಗಡ್ಡೆ ತೊಳೆದು ತುರಿಯಿರಿ. ತುರಿದ ಮೇಲೆ ನೀರು ಹಾಕಿ ತೊಳೆದು ಹೆಚ್ಚುವರಿ ನೀರನ್ನು ತೆಗೆದುಹಾಕಿ ಇಡಿ.
ಒಂದು ಬಟ್ಟಲಿನಲ್ಲಿ ಆಲೂಗಡ್ಡೆ, ಗೋಧಿಹಿಟ್ಟು, ಉಪ್ಪು, ಮೆಣಸಿನಪುಡಿ, ಕರಿ ಮೆಣಸು ಹಾಕಿ ಚೆನ್ನಾಗಿ ಕಲಸಿ. ಚಿಕ್ಕ ಚಿಕ್ಕ ಓವಲ್ ಅಥವಾ ಹ್ಯಾಶ್ ಬ್ರೌನ್ ಶೇಪ್ ಮಾಡಿ. ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಎರಡು ಬದಿಯೂ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ.
ಕೆಚಪ್ ಅಥವಾ ಮೇಯೊ ಜೊತೆ ಬಿಸಿ ಬಿಸಿ ಸರ್ವ್ ಮಾಡಿ.

