Friday, November 21, 2025

ಹಳೆಯ 29 ಕಾನೂನುಗಳಿಗೆ ಗುಡ್ ಬೈ: ಹೊಸ ನಾಲ್ಕು ಕಾರ್ಮಿಕ ಸಂಹಿತೆ ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಇವತ್ತಿನಿಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುತ್ತಿದೆ. ಹಿಂದಿನ 29 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ ಹೊಸ ಸಂಹಿತೆಗಳನ್ನು ತಂದಿದೆ.

ಸರ್ಕಾರವು ಈ ಕಾರ್ಮಿಕ ಸಂಹಿತೆಯ ಅನುಷ್ಠಾನವನ್ನು ಐತಿಹಾಸಿಕ ನಿರ್ಧಾರವೆಂದು ಬಣ್ಣಿಸಿದೆ. ಜಾಗತಿಕವಾದ ಅತ್ಯುತ್ತಮ ನೀತಿಗಳಿಗೆ ಅನುಗುಣವಾಗಿ ಭಾರತದ ಕಾರ್ಮಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದೆ. ಕಾರ್ಮಿಕ ಹಿತ ದೃಷ್ಟಿಯಲ್ಲಿಟ್ಟುಕೊಂಡು ನಿಯಮ ರೂಪಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಸರ್ಕಾರ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು
2019ರ ವೇತನ ಸಂಹಿತೆ
2020ರ ಔದ್ಯಮಿಕ ಸಂಬಂಧಗಳ ಸಂಹಿತೆ
2020ರ ಸಾಮಾಜಿಕ ಭದ್ರತಾ ಸಂಹಿತೆ
2020ರ ಉದ್ಯೋಗನಿರತ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯಸ್ಥಿತಿ ಸಂಹಿತೆ.

ಉದ್ಯೋಗ ಸೃಷ್ಟಿ ಹೆಚ್ಚಿಸಲು ಮತ್ತು ಇನ್ನೂ ಸೂಕ್ಷ್ಮವಾದ ಕಾರ್ಮಿಕ ಸುಧಾರಣೆಗಳನ್ನು ಮಾಡಲು ಇದು ಸಹಾಯಕವಾಗಲಿದೆ ಎಂಬುದು ಸರ್ಕಾರದ ಅನಿಸಿಕೆ.

ಕಾರ್ಮಿಕ ಸಂಹಿತೆಗಳ ಮುಖ್ಯಾಂಶಗಳು
ಎಲ್ಲಾ ಕಾರ್ಮಿಕರಿಗೂ ನೇಮಕಾತಿ ಪತ್ರ ನೀಡುವುದು ಕಡ್ಡಾಯ. ಇದರಿಂದ ಉದ್ಯೋಗವು ಕಾನೂನುಬದ್ಧ

ಅರೆಕಾಲಿಕ ಮತ್ತು ಗುತ್ತಿಗೆ ಆಧಾರಿತವಾಗಿರುವ ಗಿಗ್ ಮತ್ತು ಪ್ಲಾಟ್​ಫಾರ್ಮ್ ಕೆಲಸಗಾರರು ಪಿಎಫ್, ಇಎಸ್​ಐ, ಇನ್ಷೂರೆನ್ಸ್ ಮತ್ತಿತರೆ ಸೌಲಭ್ಯ ಇರುವ ಯೂನಿವರ್ಸಲ್ ಸೋಷಿಯಲ್ ಸೆಕ್ಯೂರಿಟಿ ವ್ಯಾಪ್ತಿಗೆ ಬರುತ್ತಾರೆ.

ಎಲ್ಲಾ ಕಾರ್ಮಿಕರಿಗೂ ನಿಗದಿತವಾಗಿರುವ ಕನಿಷ್ಠ ವೇತನ ಪಡೆಯುವ ಹಕ್ಕು ಸಿಗುತ್ತದೆ.

40 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿರುವ ಕೆಲಸಗಾರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಬೇಕು.

ವೇತನವನ್ನು ಸರಿಯಾದ ಸಮಯಕ್ಕೆ ನೀಡುವುದು ಕಡ್ಡಾಯ

ಮಹಿಳೆಯರಿಗೆ ಮೈನಿಂಗ್ ಅನ್ನೂ ಸೇರಿದಂತೆ ಎಲ್ಲಾ ಸೆಕ್ಟರ್​ಗಳಲ್ಲೂ ನೈಟ್ ಶಿಫ್ಟ್ ಕೆಲಸ ಮಾಡಲು ಅನುಮತಿಸಬೇಕು.

ಒಂದು ರಿಜಿಸ್ಟ್ರೇಶನ್, ಲೈಸೆನ್ಸ್ ಮತ್ತು ರಿಟರ್ನ್ ಸೌಲಭ್ಯ ನೀಡುವ ಮೂಲಕ ಉದ್ದಿಮೆಗಳಿಗೆ ನಿಯಮಗಳನ್ನು ಸರಳಗೊಳಿಸಲಾಗಿದೆ.

ಗಿಗ್ ಮತ್ತು ಪ್ಲಾಟ್​ಫಾರ್ಮ್ ಕಾರ್ಮಿಕರು ಅಧಿಕೃತ ಉದ್ಯೋಗ ಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಪ್ಲಾಟ್​ಫಾರ್ಮ್ ಎಂದರೆ ಇಲ್ಲಿ ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಂಟ್ ಇತ್ಯಾದಿ ಅಗ್ರಿಗೇಟರ್​ಗಳು. ಅಂದರೆ ಡೆಲಿವರಿ ಪಾರ್ಟ್ನರ್ಸ್, ರೈಡಿಂಗ್ ಪಾರ್ಟ್ನರ್ಸ್ ಅವರುಗಳ ಕೆಲಸಕ್ಕೆ ಕಾನೂನು ಮಾನ್ಯತೆ ಸಿಗುತ್ತದೆ. ಅಗ್ರಿಗೇಟರ್ ಸಂಸ್ಥೆಗಳು ಇಂಥ ಕಾರ್ಮಿಕರಿಗೆಂದು ವೆಲ್ಫೇರ್ ಫಂಡ್​ಗಳನ್ನು ರಚಿಸಬೇಕು. ತಮ್ಮ ಬ್ಯುಸಿನೆಸ್ ಟರ್ನೋವರ್​ನಲ್ಲಿ ಶೇ. 1-2ರಷ್ಟನ್ನು ಈ ಕಾರ್ಮಿಕ ಕಲ್ಯಾಣ ನಿಧಿಗೆ ಹಾಕಬೇಕು ಎಂದು ಹೊಸ ಕಾನೂನು ಕಡ್ಡಾಯಗೊಳಿಸುತ್ತದೆ.

ಗುತ್ತಿಗೆ ಆಧಾರಿತ ನೌಕರರು ರೆಗ್ಯುಲರ್ ಉದ್ಯೋಗಿಗಳಿಗೆ ನೀಡುವ ಗ್ರ್ಯಾಚುಟಿ ಇತ್ಯಾದಿ ಸೌಲಭ್ಯಗಳನ್ನು ಪಡೆಯಬಹುದು. ಮಹಿಳೆಯರು ಪುರುಷರಷ್ಟು ಸಮ ವೇತನ, ರಾತ್ರಿ ಪಾಳಿ ಕೆಲಸ ಇತ್ಯಾದಿ ಅವಕಾಶ ಪಡೆಯಬಹುದು.

error: Content is protected !!