ಹೊಸದಿಗಂತ ಡಿಜಿಟಲ್ ಡೆಸ್ಕ್;
ಪಶ್ಚಿಮ ಚಂಪಾರನ್‌ನ ಗಾಂಧಿ ಆಶ್ರಮದಲ್ಲಿ ಒಂದು ದಿನದ ಮೌನ ಉಪವಾಸವನ್ನು ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಅಂತ್ಯಗೊಳಿಸಿದ್ದು, ಇದರ ಬೆನ್ನಲ್ಲೇ ನಿತೀಶ್ ಕುಮಾರ್ ಅವರ ಹೊಸ ಬಿಹಾರ ಸರ್ಕಾರದಲ್ಲಿ ಭ್ರಷ್ಟ ಮತ್ತು ಕ್ರಿಮಿನಲ್ ನಾಯಕರು ತುಂಬಿದ್ದಾರೆ ಎಂದು ಆರೋಪಿಸಿದರು.
ಜನವರಿ 15 ರಂದುತಮ್ಮ ಪಕ್ಷವು ‘ ಬಿಹಾರ ನನಿರ್ಮಾಣ ಸಂಕಲ್ಪ ಯಾತ್ರೆ ‘ಯನ್ನು ಪ್ರಾರಂಭಿಸಲಿದೆ. ಈ ಯಾತ್ರೆಯ ಮೂಲಕ ಜನ ಸುರಾಜ್ ಪಕ್ಷದ ಕಾರ್ಯಕರ್ತರು ರಾಜ್ಯದ ಎಲ್ಲಾ ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದರು.
ದ ನಿತೀಶ್ ಕುಮಾರ್ ಅವರ ಹೊಸ ಸಂಪುಟವು ಭ್ರಷ್ಟರು ಮತ್ತು ಕ್ರಿಮಿನಲ್‌ಗಳಿಂದ ತುಂಬಿದೆ. ಈ ಸಚಿವರ ಮಂಡಳಿಯು ಬಿಹಾರದ ಜನರಿಗೆ ಮುಖಕ್ಕೆ ಹೊಡೆದಂತಿದೆ. ಹಲವಾರು ಭ್ರಷ್ಟ ನಾಯಕರನ್ನು ಸೇರಿಸಿಕೊಂಡಿರುವುದು ಗಾಯದ ಮೇಲೆ ಉಪ್ಪು ಸುರಿದಂತೆ ಎಂದು ಅವರು ಆರೋಪಿಸಿದರು.
ಸಂಪುಟಕ್ಕೆ ಸೇರಿಸಲಾದ ನಾಯಕರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಕುಮಾರ್ ಅವರು ಬಿಹಾರದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುವುದಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಅವರು 1 ಕೋಟಿಗೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗೆ 10,000 ರೂ. ವರ್ಗಾಯಿಸುವ ಮೂಲಕ ಮತಗಳನ್ನು ಖರೀದಿಸಿದ್ದಾರೆ. ಈಗ, ಅವರಿಗೆ ರಾಜ್ಯದ ಬಗ್ಗೆ ಅಥವಾ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಅವರು ಆರೋಪಿಸಿದರು. ನಾನು ಏನಾದರೂ ತಪ್ಪು ಹೇಳುತ್ತಿದ್ದರೆ, ರಾಜ್ಯ ಸರ್ಕಾರ ನನ್ನನ್ನು ಜೈಲಿಗೆ ಹಾಕಬಹುದು ಎಂದು ಅವರು ಹೇಳಿದರು.
‘ಬಿಹಾರ ನನಿರ್ಮಾಣ ಸಂಕಲ್ಪ ಯಾತ್ರೆ’ಯ ಭಾಗವಾಗಿ, ಪ್ರಶಾಂತ್ ಕಿಶೋರ್ ಸೇರಿದಂತೆ ಜನ ಸುರಾಜ್ ಪಕ್ಷದ ಕಾರ್ಯಕರ್ತರು ರಾಜ್ಯದ ಪ್ರತಿ ಮನೆಗೂ ಭೇಟಿ ನೀಡಲಿದ್ದಾರೆ. ನಾವು 15-18 ತಿಂಗಳ ಅವಧಿಯಲ್ಲಿ ರಾಜ್ಯದ ಎಲ್ಲಾ ಮನೆಗಳಿಗೆ ಭೇಟಿ ನೀಡಲಿದ್ದೇವೆ ಮತ್ತು ಈ ಸರ್ಕಾರದ ದುಷ್ಕೃತ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದೇವೆ. ಯಾತ್ರೆ ಪ್ರಾರಂಭವಾಗುವ ಮೊದಲು ಜನ ಸುರಾಜ್ ಪಕ್ಷದ ಸಂಘಟನೆಯನ್ನು ಬಲಪಡಿಸಲಾಗುವುದು ಎಂದು ಅವರು ತಿಳಿಸಿದರು.
ಕಳೆದ ಐದು ವರ್ಷಗಳಲ್ಲಿ ತಮ್ಮ ಆದಾಯದ ಶೇ. 90 ರಷ್ಟನ್ನು ಪಕ್ಷದ ಪ್ರಚಾರಕ್ಕಾಗಿ ದಾನ ಮಾಡುವುದಾಗಿ ಮಾಜಿ ಚುನಾವಣಾ ತಂತ್ರಜ್ಞರು ಹೇಳಿದ್ದಾರೆ. ಕಳೆದ 20 ವರ್ಷಗಳಲ್ಲಿ ತಾವು ಸಂಪಾದಿಸಿದ ಆಸ್ತಿಗಳೆಲ್ಲವನ್ನೂ, ತಮ್ಮ ದೆಹಲಿ ಮನೆಯನ್ನು ಹೊರತುಪಡಿಸಿ, ಪಕ್ಷಕ್ಕಾಗಿ ದಾನ ಮಾಡುವುದಾಗಿ ತಿಳಿಸಿದರು. ಈಗ, ಬಿಹಾರದ ಜನರಿಗೆ ವಾರ್ಷಿಕವಾಗಿ ಕೇವಲ 1,000 ರೂ. ಪಕ್ಷಕ್ಕೆ ದೇಣಿಗೆ ನೀಡುವಂತೆ ಅವರು ಮನವಿ ಮಾಡಿದರು. ಈ ಮೊತ್ತವನ್ನು ದೇಣಿಗೆ ನೀಡದವರನ್ನು ಭೇಟಿಯಾಗುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಮಹಾತ್ಮ ಗಾಂಧಿಯವರ ತಾಳ್ಮೆ ಮತ್ತು ಪರಿಶ್ರಮದ ಸಿದ್ಧಾಂತವನ್ನು ತಾವು ನಂಬುವುದಾಗಿ ಕಿಶೋರ್ ಹೇಳಿದರು. ನಾವು ಸರ್ಕಾರವನ್ನು ಬದಲಾಯಿಸುತ್ತೇವೆ. ಈ ಚುನಾವಣೆಯಲ್ಲಿ ಅವರು ನಮ್ಮ ಮನೋಬಲವನ್ನು ಮುರಿಯಲು ಪ್ರಯತ್ನಿಸಿದರು. ನಾವು ಹೋರಾಡಿ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

