Tuesday, November 25, 2025

Read It | ಪ್ರಪಂಚದ 5 ಅತ್ಯಂತ ವಿಷಕಾರಿ ಹಾವು ಯಾವುದು ಗೊತ್ತಾ?

ಹಾವುಗಳನ್ನು ಕಂಡರೆ ಸಾಮಾನ್ಯವಾಗಿ ಜನರು ಹೆದರುತ್ತಾರೆ, ಆದರೆ ಪ್ರಪಂಚದಲ್ಲಿ ಕೆಲವು ಹಾವುಗಳ ವಿಷ ಮಾನವರ ಬದುಕು–ಸಾವು ಪ್ರಶ್ನೆಯಾಗುವಷ್ಟು ಭಯಾನಕವಾಗಿರುತ್ತದೆ. ವಿಜ್ಞಾನಿಗಳು ಮತ್ತು ವನ್ಯಜೀವಿ ತಜ್ಞರ ಪ್ರಕಾರ, ಕೆಲವು ಹಾವುಗಳ ವಿಷದ ತೀಕ್ಷ್ಣತೆ ಮನುಷ್ಯನ ದೇಹದಲ್ಲಿ ಕ್ಷಣಗಳಲ್ಲಿ ಪರಿಣಾಮ ಬೀರುತ್ತದೆ. ಇಂತಹ ಹಾವುಗಳ ಬಗ್ಗೆ ತಿಳಿದುಕೊಳ್ಳುವುದು ಕೇವಲ ಕುತೂಹಲವಲ್ಲ, ಜಾಗೃತಿಯೂ ಆಗಿದೆ. ಇಲ್ಲಿವೆ ಪ್ರಪಂಚದ ಅತ್ಯಂತ ಮರಣಾಂತಿಕ 5 ವಿಷಕಾರಿ ಹಾವುಗಳು.

ಇನ್‌ಲ್ಯಾಂಡ್ ಟೈಪಾನ್ (Inland Taipan ) ವಿಷದ ತೀಕ್ಷ್ಣತೆಯಲ್ಲಿ ಪ್ರಪಂಚದ ಮೊದಲ ಸ್ಥಾನದಲ್ಲಿದೆ ಇದು. ಒಂದು ಚೂರು ವಿಷ ನೂರಾರು ಜನರನ್ನು ಕೊಲ್ಲುವಷ್ಟು ಸಾಮರ್ಥ್ಯ ಹೊಂದಿದೆ. ಆಸ್ಟ್ರೇಲಿಯಾದ ಶುಷ್ಕ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಕಿಂಗ್ ಕೋಬ್ರಾ( King Cobra) : ಇದು ಜಗತ್ತಿನ ಉದ್ದವಾದ ವಿಷಕಾರಿ ಹಾವು. ಒಮ್ಮೆ ಕಚ್ಚಿದ್ರೆ ಅಪಾರ ಪ್ರಮಾಣದ ನ್ಯೂರೋಟಾಕ್ಸಿನ್ ಬಿಡುಗಡೆಯಾಗುತ್ತದೆ. ಈ ಹಾವುಗಳು ಪ್ರಮುಖವಾಗಿ ದಕ್ಷಿಣ ಏಷ್ಯಾದ ಅರಣ್ಯಗಳಲ್ಲಿ ವಾಸಮಾಡುತ್ತವೆ.

ಬ್ಲಾಕ್ ಮಾಮ್ಬಾ(Black Mamba): ಸಾವಿನ ವೇಗದ ರಾಜ ಎಂದು ಕರೆಯಲ್ಪಡುವ ಈ ಹಾವು ವೇಗ ಹಾಗೂ ಚುರುಕುತನಕ್ಕೆ ಪ್ರಸಿದ್ಧ. ಕಚ್ಚಿದ ಕೆಲವೇ ನಿಮಿಷಗಳಲ್ಲಿ ನರಮಂಡಲ ಸ್ಥಬ್ದವಾಗಿಬಿಡುತ್ತದೆ.

ರಸ್ಸೆಲ್ಲ್ಸ್ ವೈಪರ್(Russell’s Viper): ಭಾರತದಲ್ಲೂ ಕಂಡುಬರುವ ಅತ್ಯಂತ ಅಪಾಯಕಾರಿ ಹಾವು ಇದು. ಇದು ಕಚ್ಚಿದರೆ ರಕ್ತದ ಹೆಪ್ಪುಗಟ್ಟುವುದು, ಒಳ ರಕ್ತಸ್ರಾವ, ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು.

ಟೈಗರ್ ಸರ್ಪ (Tiger Snake): ಆಸ್ಟ್ರೇಲಿಯಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಹಾವುಗಳ ನ್ಯೂರೋಟಾಕ್ಸಿನ್ ಮತ್ತು ಮಿಯೋ ಟಾಕ್ಸಿನ್ ಮಿಶ್ರಿತ ವಿಷ ದೇಹದ ಸ್ನಾಯುಗಳನ್ನು ಶಿಥಿಲಗೊಳಿಸುತ್ತದೆ.

error: Content is protected !!