Tuesday, November 25, 2025

ವೀಕೆಂಡ್ ಗೆ ಅಚ್ಚರಿ ಮೂಡಿಸಿದ ಧಾರಾಕಾರ ಮಳೆ: ಗುಡುಗು ಸಿಡಿಲ ಆರ್ಭಟಕ್ಕೆ ನಡುಗಿದ ಕರಾವಳಿ

ಹೊಸ ದಿಗಂತ ವರದಿ, ಮಂಗಳೂರು:

ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಶನಿವಾರ ಧಿಡೀರ್ ಭಾರೀ ಮಳೆಯಾಗಿದೆ.

ರಾತ್ರಿ 10 ಗಂಟೆ ವೇಳೆ ಆರಂಭಗೊಂಡ ಸಿಡಿಲು ಮಿಂಚು ಸಹಿತ ಗಾಳಿ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ಥಗೊಳಿಸಿತು. ಮಂಗಳೂರು ನಗರ ಸೇರಿದಂತೆ ಬಂಟ್ವಾಳ, ಬೆಳ್ತಂಗಡಿ ,ಕಡಬ, ಸುಳ್ಯ ಮೊದಲಾದ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಹಠಾತನೆ ಸುರಿದ ಮಳೆಯಿಂದಾಗಿ ಮಂಗಳೂರು ನಗರ ಸೇರಿದಂತೆ ವಿವಿಧ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ವಾಯುಭಾರ ಕುಸಿತದಿಂದಾಗಿ ಈ ಮಳೆ ಕಾಣಿಸಿಗೊಂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಯ ಕೆಲವೆಡೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಒಂದು ಎರಡು ಭಾಗಗಳಲ್ಲಿ ನಾಳೆಯೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

error: Content is protected !!