Tuesday, November 25, 2025

ದಿನಭವಿಷ್ಯ: ವೈವಾಹಿಕ ಸಂಬಂಧದಲ್ಲಿ ವಿರಸ, ಉದ್ಯೋಗ ಅಪೇಕ್ಷಿತರಿಗೆ ಶುಭ ಸುದ್ದಿ

ಮೇಷ.
ನಿಮ್ಮ ಸಮರ್ಥ ಕಾರ್ಯದಿಂದ ಗೌರವ ಗಳಿಸುವಿರಿ. ವೈವಾಹಿಕ ಸಂಬಂಧದಲ್ಲಿ ವಿರಸ. ಮಿತಾಹಾರ ಒಳಿತು. ಬಂಧು ಕಲಹ.
ವೃಷಭ
ಈವರೆಗಿನ ನಿಮ್ಮ ಸಾಧನೆ ಸಂಭ್ರಮಿಸುವ ದಿನ. ವೃತ್ತಿ ಕಾರ್ಯ ಸುಲಲಿತ. ಹಣದ ಸಮಸ್ಯೆ ಕಾಡಿದರೂ ಬೇಗ ಪರಿಹಾರ. ನಿರಾಳತೆ.
ಮಿಥುನ
ಬದುಕಲ್ಲಿ ದೀರ್ಘ ಕಾಲ ಉಳಿಯುವಂತಹ ಹೊಸ ಸಂಬಂಧ ಬೆಳೆಯ ಬಹುದು. ಭಾವನೆಗಳ ತಾಕಲಾಟ. ಆತ್ಮೀಯರ ಸಹಕಾರ ಪಡೆಯಿರಿ.
ಕಟಕ
ಒತ್ತಡದ ದಿನ. ನೆಮ್ಮದಿ ದೂರ. ಕೆಲವು ವ್ಯಕ್ತಿಗಳು ನಿಮ್ಮನ್ನು ದುರ್ಬಲಗೊಳಿಸಲು ಯತ್ನಿಸುವರು. ದೃಢ ನಿಲುವು ಅತ್ಯವಶ್ಯ.
ಸಿಂಹ
ಕೆಲ ವಿಷಯದಲ್ಲಿ ಮೃದು ಧೋರಣೆ ಫಲ ನೀಡದು. ಕಠಿಣವಾಗಿ ವರ್ತಿಸಿರಿ. ಹಿರಿಯರ ಸಲಹೆ ಪಾಲಿಸಿ. ಬಂಧುತ್ವ ಉಳಿಸಲು ಗಮನ ಕೊಡಿ.
ಕನ್ಯಾ
ಏರುಪೇರಿನ ದಿನ. ಕುಟುಂಬದಲ್ಲಿ ಭಿನ್ನಮತ ಸಂಭವ. ಖರ್ಚು ನಿಯಂತ್ರಿಸಲು ಸಫಲ. ಉದ್ಯೋಗ ಅಪೇಕ್ಷಿತರಿಗೆ ಶುಭ ಬೆಳವಣಿಗೆ.
ತುಲಾ
ಅಹಿತಕರ ಬೆಳವಣಿಗೆ ಸಂಭವ. ಚಿಂತೆ ಬೇಡ, ಬೇಗನೆ ಎಲ್ಲ ಸರಿದಾರಿಗೆ ಮರಳಲಿದೆ. ನಿಮ್ಮ ಬದುಕಿಗೆ ಪ್ರಮುಖ ವ್ಯಕ್ತಿ ಪ್ರವೇಶಿಸುವರು.
ವೃಶ್ಚಿಕ
ಎಂದಿನಂತಲ್ಲ ಈ ದಿನ. ಮಹತ್ವದ ಬೆಳವಣಿಗೆ ಉಂಟಾದೀತು. ಪ್ರತಿಕೂಲ ಆಗಿದ್ದರೆ ಅದನ್ನು ಎದುರಿಸಲು ಸಜ್ಜಾಗಿ. ಸೂಕ್ತ ಬೆಂಬಲ ಲಭ್ಯ.
ಧನು
ನಿರೀಕ್ಷಿತ ಫಲ ಇಂದು ದೊರಕದು. ಹೆಚ್ಚುವರಿ ಹೊಣೆ. ವೃತ್ತಿ ವ್ಯವಹಾರದಲ್ಲಿ ಸಣ್ಣ ವಿಷಯಕ್ಕೂ ಗಮನ ಕೊಡಿ. ಕಡೆಗಣಿಸಬೇಡಿ.
ಮಕರ
ಪ್ರವಾಹದ ಜತೆಗೆ ಈಜುವುದು ನಿಮ್ಮ ಮಂತ್ರವಾಗಲಿ. ಪರಿಸ್ಥಿತಿ ಬದಲಿಸಲು ಯತ್ನಿಸಬೇಡಿ. ಸಣ್ಣ ವಿಷಯ ನಿಮ್ಮ ಸ್ಥೈರ್ಯ ಕೆಡಿಸಬಹುದು.
ಕುಂಭ
ಹೊಣೆಗಾರಿಕೆ ಹೆಚ್ಚು. ದಿನವಿಡೀ ಕ್ರಿಯಾಶೀಲರಾಗುವಿರಿ. ಹಣದ ಹರಿವು ಹೆಚ್ಚಳ. ಅದರ ಜತೆಗೆ ಚಿಂತೆಯೂ ಬಾಧಿಸಲಿದೆ.
ಮೀನ
ನಿಮ್ಮ ವರ್ಚಸ್ಸು ಇಂದು ಹೆಚ್ಚಲಿದೆ. ಹೊಟ್ಟೆ ಕೆಡುವ ಸಾಧ್ಯತೆ. ಸಣ್ಣ ವಿಚಾರದಲ್ಲಿ ವಾಗ್ವಾದಕ್ಕೆ ಇಳಿಯಬೇಡಿ. ಮಕ್ಕಳಿಂದ ಒತ್ತಡ ಹೆಚ್ಚಲಿದೆ.

error: Content is protected !!