ಮನೆಯಲ್ಲೇ ಬೇಗನೇ ತಯಾರಿಸಬಹುದಾದ, ಮೃದು–ಸಿಹಿಯಾದ ತಿನಿಸು ಬೇಕಾದರೆ ಬಾಳೆಹಣ್ಣಿನ ಮುಳ್ಕ ಬೆಸ್ಟ್ ಆಯ್ಕೆ. ಸಂಜೆ ತಿಂಡಿ ಆಗಲಿ ಅಥವಾ ಮಕ್ಕಳಿಗೆ ಸಿಹಿ ಸ್ನ್ಯಾಕ್ ಬೇಕಾದ್ರೆ ಈ ಮುಳ್ಕ ಫಟಾಫಟ್ ಅಂತ ರೆಡಿ ಆಗುತ್ತೆ!
ಬೇಕಾಗುವ ಪದಾರ್ಥಗಳು
ಬಾಳೆಹಣ್ಣು – 2
ಗೋಧಿಹಿಟ್ಟು – 1 ಕಪ್
ಬೆಲ್ಲ/ಸಕ್ಕರೆ – ½ ಕಪ್ (ರುಚಿಗೆ ತಕ್ಕಂತೆ)
ಎಲಕ್ಕಿ ಪುಡಿ – ½ ಚಮಚ
ಬೇಕಿಂಗ್ ಸೋಡಾ – ಚಿಟಿಕೆ
ತೆಂಗಿನ ತುರಿ – 2 ಚಮಚ (ಐಚ್ಛಿಕ)
ಕರಿಯಲು ಎಣ್ಣೆ
ತಯಾರಿಸುವ ವಿಧಾನ
ಮೊದಲು ಬಾಳೆಹಣ್ಣುಗಳನ್ನು ಚೆನ್ನಾಗಿ ಮ್ಯಾಷ್ ಮಾಡಿ. ಅದಕ್ಕೆ ಸಕ್ಕರೆ ಅಥವಾ ಬೆಲ್ಲ, ಎಲಕ್ಕಿ ಪುಡಿ, ತೆಂಗಿನ ತುರಿ ಸೇರಿಸಿ ಮಿಶ್ರಣ ಮಾಡಿ.
ಈಗ ಗೋಧಿಹಿಟ್ಟು ಮತ್ತು ಚಿಟಿಕೆ ಬೇಕಿಂಗ್ ಸೋಡಾ ಸೇರಿಸಿ ಗಟ್ಟಿಯಾಗದ, ದೋಸೆ ಹಿಟ್ಟಿನ ಹಾಗಿರುವ ಮಿಶ್ರಣ ತಯಾರು ಮಾಡಿ. ಎಣ್ಣೆ ಕಾದ ಮೇಲೆ ಚಮಚದಿಂದ ಚಿಕ್ಕ ಉಂಡೆಗಳಿರುವಂತೆ ಹಿಟ್ಟನ್ನು ಹಾಕಿ. ಮಧ್ಯಮ ಉರಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಫ್ರೈ ಮಾಡಿ

