January16, 2026
Friday, January 16, 2026
spot_img

Pakistan vs Bangladesh | ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಕಿರೀಟ ಮುಡುಗೇರಿಸಿಕೊಂಡ ಪಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೋಹಾದಲ್ಲಿ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಅಂತಿಮ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಉಸಿರುಗಟ್ಟಿಸುವ ರೋಮಾಂಚ ನೀಡಿತು. ಪಾಕಿಸ್ತಾನ ಎ ತಂಡ ಮತ್ತು ಬಾಂಗ್ಲಾದೇಶ ಎ ತಂಡ ನಡುವಿನ ಕಾದಾಟ ನಿಗದಿತ ಓವರ್‌ಗಳಲ್ಲೂ, ಸೂಪರ್ ಓವರ್‌ನಲ್ಲೂ ರೋಚಕ ತಿರುವು ಪಡೆದು, ಅಂತಿಮವಾಗಿ ಪಾಕಿಸ್ತಾನ ಮೂರನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ 125 ರನ್‌ಗಳಿಗೆ ಆಲೌಟ್ ಆಯಿತು. ರಿಪ್ಪನ್ ಮಂಡಲ್ ಮತ್ತು ರಾಕಿಬುಲ್ ಹಸನ್ ಬೌಲಿಂಗ್ ಅಬ್ಬರಕ್ಕೆ ಪಾಕ್ ಬ್ಯಾಟಿಂಗ್ ಕುಸಿತ ಕಂಡಿತು. ಗುರಿ ಬೆನ್ನತ್ತಿದ ಬಾಂಗ್ಲಾದೇಶವೂ ಒಂಬತ್ತು ವಿಕೆಟ್ ನಷ್ಟಕ್ಕೆ ಅಷ್ಟೇ ರನ್ ಗಳಿಸಿ ಪಂದ್ಯವನ್ನು ಟೈ ಮಾಡಿತು. ಅಂತಿಮ ಓವರ್‌ಗಳಲ್ಲಿ ಮಂಡಲ್–ಗಫಾರ್ ಜೋಡಿ ಮೂರು ಸಿಕ್ಸರ್‌ಗಳಿಂದ ಪಂದ್ಯವನ್ನು ಹಿಂತಿರುಗಿಸಿದರೂ, ಗೆಲುವಿಗೆ ಅಗತ್ಯವಿದ್ದ ಎರಡನೇ ರನ್ ಕೊನೆಯ ಎಸೆತದಲ್ಲಿ ಬರದೇ ಪಂದ್ಯ ಸೂಪರ್ ಓವರ್‌ಗೆ ನೂಕಲ್ಪಟ್ಟಿತು.

ಸೂಪರ್ ಓವರ್‌ನಲ್ಲಿ ಬಾಂಗ್ಲಾದೇಶ ಕೇವಲ ಆರು ರನ್ ಗಳಿಸಿತು. ಪಾಕ್ ಬೌಲರ್‌ಗಳ ಒತ್ತಡಕ್ಕೆ ಇಬ್ಬರು ಬ್ಯಾಟ್ಸ್‌ಮನ್‌ಗಳು ಔಟಾದರು. ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ ನಾಲ್ಕನೇ ಎಸೆತದಲ್ಲೇ ಅಗತ್ಯ ರನ್‌ಗಳನ್ನು ಸಂಪಾದಿಸಿ ಸುಲಭವಾಗಿ ಕಪ್ ಖಚಿತಪಡಿಸಿತು.

Must Read

error: Content is protected !!