ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಬೂಲ್‌ನಿಂದ ಬಂದ ಅರಿಯಾನಾ ಅಫ್ಘಾನ್ ಏರ್‌ಲೈನ್ಸ್‌ನ FG 311 ವಿಮಾನವು ಸಾಮಾನ್ಯವಾಗಿ ಟೇಕಾಫ್‌ಗಾಗಿ ಮೀಸಲಿಟ್ಟ ರನ್‌ವೇ 29R ಮೇಲೆ ನೇರವಾಗಿ ಇಳಿದಿದೆ. ಟೇಕಾಫ್‌ಗೆ ಕಾಯುತ್ತಿದ್ದ ಯಾವುದೇ ವಿಮಾನ ಆ ಕ್ಷಣದಲ್ಲಿ ರನ್‌ವೇಯಲ್ಲಿ ಇರದ ಕಾರಣ, ಬಹು ದೊಡ್ಡ ಅನಾಹುತ ಅದೃಷ್ಟವಶಾತ್ ತಪ್ಪಿದೆ.
ಮಧ್ಯಾಹ್ನ 12:07ಕ್ಕೆ ಈ ವಿಮಾನ ರನ್‌ವೇ 29R ಮೇಲೆ ಲ್ಯಾಂಡ್ ಆಗಿದ್ದರೂ, ಇಲ್ಲಿ ಸಾಮಾನ್ಯವಾಗಿ ನಿರ್ಗಮನ (departure) ಮಾತ್ರ ನಡೆಯುತ್ತದೆ. ಆಗಮನಕ್ಕೆ ಬಳಸುವ ರನ್‌ವೇ 29L ಈ ವೇಳೆಯಲ್ಲಿ ಖಾಲಿ ಇದ್ದರೂ, ರನ್‌ವೇ ಬದಲಾವಣೆಗಾಗಿ ನೀಡಲಾದ ಸೂಚನೆಗಳಲ್ಲಿ ಗೊಂದಲ ಉಂಟಾಗಿದೆಯೇ ಎಂಬುದು ಅಧಿಕಾರಿಗಳ ಅನುಮಾನ.
ವಿಮಾನ ನಿಯಂತ್ರಣ ಕಕ್ಷಿಯಿಂದ ತಪ್ಪು ಸೂಚನೆ ನೀಡಲಾಗಿದೆಯೇ? ಅಥವಾ ಪೈಲಟ್ ಅವರು ಸೂಚನೆಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡರೇ? ಎಂಬುದರ ಕುರಿತು ತನಿಖೆ ಈಗ ವೇಗ ಪಡೆದುಕೊಂಡಿದೆ. ಗಾಳಿಯ ದಿಕ್ಕು ಮತ್ತು ಹವಾಮಾನ ಆಧರಿಸಿ ಕೆಲವು ಸಂದರ್ಭಗಳಲ್ಲಿ ರನ್‌ವೇ ಬಳಕೆಯನ್ನು ಪರಸ್ಪರ ಬದಲಾಯಿಸುವುದು ಸಾಮಾನ್ಯವಾಗಿದ್ದರೂ, ಈ ಬಾರಿ ಸಂಭವಿಸಿದ ಸಮನ್ವಯ ದೋಷ ಗಂಭೀರ ಸ್ವಭಾವದ್ದಾಗಿದೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.

