ಸಸ್ಯಾಹಾರಿಗಳಿಗೂ ಪ್ರೋಟೀನ್ ಸಮೃದ್ಧವಾದ, ರುಚಿಕರ ಹಾಗೂ ಸುಲಭವಾಗಿ ತಯಾರಿಸಿ ತಿನ್ನಬಹುದಾದ ಒಂದು ಸೂಪರ್ ಡಿಶ್ ಎಂದರೆ ಸೋಯಾ ಬಿರಿಯಾನಿ. ಸಾಮಾನ್ಯ ಬಿರಿಯಾನಿಗಿಂತ ಇದು ಲೈಟ್ ಆಗಿ, ಆರೋಗ್ಯಕರವಾಗಿಯೂ ಇರುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಉತ್ತಮ ಆಯ್ಕೆಯೂ ಹೌದು.
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1 ಕಪ್
ಸೋಯಾ ಚಂಕ್ಸ್ – 1 ಕಪ್
ಈರುಳ್ಳಿ – 2 (ಸ್ಲೈಸ್)
ಟೊಮೇಟೊ – 1 (ಚೂರು)
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಪುದೀನಾ ಮತ್ತು ಕೊತ್ತಂಬರಿ – ಸ್ವಲ್ಪ
ಬಿರಿಯಾನಿ ಮಸಾಲಾ – 1 ಟೇಬಲ್ಸ್‌ಪೂನ್
ಅರಿಶಿನ – ¼ ಟೀಸ್ಪೂನ್
ಲವಂಗ, ದಾಲ್ಚಿನ್ನಿ, ಏಲಕ್ಕಿ – ತಲಾ 2
ಎಣ್ಣೆ ಅಥವಾ ತುಪ್ಪ – 2 ಟೇಬಲ್ಸ್‌ಪೂನ್
ಉಪ್ಪು – ರುಚಿಗೆ
ನೀರು – 2 ಕಪ್
ಮಾಡುವ ವಿಧಾನ:
ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಸೋಯಾ ಚಂಕ್ಸ್ 10 ನಿಮಿಷ ನೆನೆಸಿ. ನಂತರ ಒತ್ತಿ ನೀರು ತೆಗೆದುಬಿಡಿ.
ಈಗ ಒಂದು ಪ್ಯಾನ್‌ನಲ್ಲಿ ಎಣ್ಣೆ/ತುಪ್ಪ ಹಾಕಿ, ಲವಂಗ, ಏಲಕ್ಕಿ, ದಾಲ್ಚಿನ್ನಿ ಫ್ರೈ ಮಾಡಿ. ನಂತರ ಈರುಳ್ಳಿ ಹಾಕಿ ಚಿನ್ನದ ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ. ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ, ಹಸಿಮೆಣಸು, ಅರಿಶಿನ, ಬಿರಿಯಾನಿ ಮಸಾಲಾ ಹಾಕಿ ಚೆನ್ನಾಗಿ ಬೇಯಿಸಿ. ಈಗ ನೆನೆಸಿದ ಸೋಯಾ ಚಂಕ್ಸ್ ಹಾಗೂ ಪುದೀನಾ-ಕೊತ್ತಂಬರಿ ಸೇರಿಸಿ 2–3 ನಿಮಿಷ ಫ್ರೈ ಮಾಡಿ.
ತೊಳೆದ ಅಕ್ಕಿ ಮತ್ತು ನೀರು ಹಾಕಿ ಉಪ್ಪು ಸೇರಿಸಿ. ಮುಚ್ಚಿ 10–12 ನಿಮಿಷ ಮಾಧ್ಯಮ ಉರಿಯಲ್ಲಿ ಬೇಯಿಸಿದರೆ ಸೋಯಾ ಬಿರಿಯಾನಿ ರೆಡಿ.

