Wednesday, November 26, 2025

ಮೃಣಾಲ್ ಪೋಸ್ಟ್‌ಗೆ ಧನುಷ್ ಕಮೆಂಟ್: ಮತ್ತೆ ಹೆಚ್ಚಾಗ್ತಿದೆ ಡೇಟಿಂಗ್ ಗುಸುಗುಸು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರರಂಗದಲ್ಲಿ ಗಾಳಿಸುದ್ದಿಗಳಿಗಂತೂ ಬರಗಾಲವಿಲ್ಲ. ಒಂದಲ್ಲ ಒಂದು ವಿಷಯ ಸಿಕ್ಕೇ ಸಿಗುತ್ತೆ. ಈಗ ತಮಿಳು ನಟ ಧನುಷ್ ಮತ್ತು ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಬಗ್ಗೆ ಹರಿದಾಡುತ್ತಿದ್ದ ಡೇಟಿಂಗ್ ಸುದ್ದಿಗಳು ಮತ್ತೆ ಚರ್ಚೆಗೆ ಬಂದಿವೆ. ‘ಸನ್ ಆಫ್ ಸರ್ದಾರ್ 2’ ಪ್ರೀಮಿಯರ್‌ ಸಂದರ್ಭದಲ್ಲಿ ಇಬ್ಬರೂ ತಬ್ಬಿಕೊಂಡು ಶುಭಾಶಯ ಹಂಚಿಕೊಂಡ ಕ್ಷಣ ವೈರಲ್ ಆದ ಬಳಿಕ, ಇವರಿಬ್ಬರ ಮಧ್ಯೆ ಸ್ಪೆಷಲ್ ಬಾಂಡ್‌ ಇದೆ ಎಂಬ ಮಾತು ಗಾಳಿಯಲ್ಲಿ ಕೇಳಿಬಂದಿತ್ತು. ಇದೀಗ ಧನುಷ್ ಕಮೆಂಟ್ ಈ ಮಾತುಗಳಿಗೆ ಮತ್ತೆ ಹೊಸ ಜೀವ ತುಂಬಿದಂತಾಗಿದೆ.

ಮೃಣಾಲ್ ತಮ್ಮ ಹೊಸ ಸಿನಿಮಾ ‘ದೋ ದಿವಾನೆ ಶಹರ್ ಮೇ’ ಅನಿಮೇಟೆಡ್ ಟೀಸರ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಾಗ, ಧನುಷ್ “Looks and sounds good” ಎಂದು ಪ್ರತಿಕ್ರಿಯಿಸಿದ್ದರು. ಈ ಮೆಚ್ಚುಗೆಗೆ ಮೃಣಾಲ್ ಹೃದಯ ಮತ್ತು ಸೂರ್ಯಕಾಂತಿ ಎಮೋಜಿಗಳ ಮೂಲಕ ಉತ್ತರಿಸಿದ್ದರು. ಇವರಿಬ್ಬರ ನಡುವಿನ ಈ ಚಿಕ್ಕ ಸಂಭಾಷಣೆಯೇ ನೆಟ್ಟಿಗರ ಗಮನ ಸೆಳೆದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ತೀವ್ರಗೊಂಡಿದೆ.

ಈ ಕಮೆಂಟ್ ಕಂಡ ಅಭಿಮಾನಿಗಳು ಹಲವಾರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕೆಲವರು ಮೃಣಾಲ್ ಅನ್ನು ನೇರವಾಗಿ ಧನುಷ್ ‘ಗರ್ಲ್‌ಫ್ರೆಂಡ್’ ಎಂದು ಕರೆದರೆ, ಇನ್ನೂ ಕೆಲವರು ‘ತಲೈವಾ–ತಲೈವಿ’ ಜೋಡಿ ಎಂದು ಟ್ಯಾಗ್ ಹಾಕುತ್ತಿದ್ದಾರೆ. ಇಬ್ಬರ ನಡುವೆ ಇರುವ ಕೆಮಿಸ್ಟ್ರಿ ಕುರಿತು ಹೊಸ ಚರ್ಚೆಗಳು ಈಗ ಟ್ರೆಂಡ್ ಆಗಿವೆ.

error: Content is protected !!