Wednesday, November 26, 2025

Kitchen tips | ಹಸಿ ಬಟಾಣಿಯನ್ನು ಹಾಳಾಗದಂತೆ ವರ್ಷವಿಡೀ ಫ್ರೆಶ್ ಆಗಿ ಇಡಬಹುದು! ಈ ಟ್ರಿಕ್ಸ್ ಫಾಲೋ ಮಾಡಿ ಸಾಕು

ಹಸಿರು ಬಟಾಣಿ ಸೀಸನ್‌ ಶುರುವಾಗಿದೆ. ಸಿಹಿ ರುಚಿ ಹಾಗೂ ಪೋಷಕಾಂಶಗಳಿಂದ ತುಂಬಿರೋ ಈ ಬಟಾಣಿಗಳನ್ನು ಹಲವು ತಿಂಗಳುಗಳ ಕಾಲ ಫ್ರೆಶ್ ಆಗಿ ಸಂಗ್ರಹಿಸೋದೇ ದೊಡ್ಡ ಸವಾಲು. ಆದ್ದರಿಂದ ಹಸಿ ಬಟಾಣಿಯನ್ನು ಈ ಸೀಸನ್‌ನಲ್ಲಿ ಸರಿಯಾಗಿ ಸಂಗ್ರಹಿಸಿದರೆ ತಿಂಗಳುಗಳವರೆಗೆ ತಾಜಾ ರುಚಿಯನ್ನು ಕಾಪಾಡಿಕೊಳ್ಳಬಹುದು.

  • ಬಟಾಣಿಯನ್ನು ತೊಳೆದು ನೀರು ಚೆನ್ನಾಗಿ ಒಣಗಲು ಬಿಡಿ. ನೀರು ಉಳಿದರೆ ಫಂಗಸ್ ಬರುತ್ತದೆ.
  • ಬ್ಲಾಂಚಿಂಗ್ ವಿಧಾನ ಬಳಸಿ: ಬಟಾಣಿಯನ್ನು 2 ನಿಮಿಷ ಬಿಸಿ ನೀರಿನಲ್ಲಿ ಬ್ಲಾಂಚ್ ಮಾಡಿ ತಕ್ಷಣ ತಣ್ಣೀರು ಹಾಕಿ. ಇದರಿಂದ ಬಣ್ಣ, ರುಚಿ ಹಾಗೆ ಉಳಿಯುತ್ತದೆ.
  • ಏರ್-ಟೈಟ್ ಬ್ಯಾಗ್/ಬಾಕ್ಸ್ ಬಳಸಿ: ಹೆಚ್ಚುವರಿ ಗಾಳಿ ತೆಗೆದು ಫ್ರಿಜ್ ಫ್ರೀಜರ್‌ ಒಳಗೆ ಇಡಿ. ಇದು ತಿಂಗಳುಗಳ ಕಾಲ ತಾಜಾತನ ಕಾಪಾಡುತ್ತದೆ.
  • ಸಣ್ಣ ಸಣ್ಣ ಪ್ಯಾಕ್‌ಗಳಲ್ಲಿ ಇಡಿ ಇದರಿಂದ ಬೇಕಾದಷ್ಟು ಮಾತ್ರ ಹೊರಕ್ಕೆ ತೆಗೆದುಕೊಳ್ಳಲು ಸುಲಭವಾಗುತ್ತದೆ.
  • ಫ್ರೀಜರ್ ಟೆಂಪರೇಚರ್ ಸ್ಥಿರ ಇರಲಿ: ಡೀಪ್ ಫ್ರೀಜರ್‌ನಲ್ಲಿ ಇಟ್ಟರೆ 6–8 ತಿಂಗಳುಗಳವರೆಗೆ ಚೆನ್ನಾಗಿ ಉಳಿಯುತ್ತವೆ.
error: Content is protected !!