Wednesday, November 26, 2025

Viral | ಪುಟ್ಟ ಬಾಲಕನ ಮೇಲೆರಗಿದ ಪಿಟ್‌ಬುಲ್! ಆಮೇಲೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಪ್ರೇಮ್ ನಗರ ಪ್ರದೇಶದಲ್ಲಿ 6 ವರ್ಷದ ಬಾಲಕನ ಮೇಲೆ ಪಿಟ್‌ಬುಲ್ ನಾಯಿ ದಾಳಿ ನಡೆಸಿ, ಬಾಲಕನ ಕಿವಿಯೊಂದನ್ನು ಕಚ್ಚಿದ ಅಮಾನವೀಯ ಘಟನೆ ನಡೆದಿದೆ.

ಕಿರಾರಿ ಪ್ರದೇಶದ ಪ್ರೇಮ್ ನಗರ III ರ ವಿನಯ್ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದ ರಾಜೇಶ್ ಪಾಲ್ ಎಂಬುವವರಿಗೆ ಸೇರಿದ ಪಿಟ್ ಬುಲ್ ಬಾಲಕನ ಮೇಲೆ ದಾಳಿ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋದಲ್ಲಿ ಬಾಲಕ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ನಾಯಿ ಹತ್ತಿರದಲ್ಲಿ ನಿಂತಿದ್ದ ಮಹಿಳೆಯ ನಿಯಂತ್ರಣದಿಂದ ಬಿಡಿಸಿಕೊಂಡು ಬಾಲಕನ ಮೇಲೆ ದಾಳಿ ಮಾಡಿದೆ.

ಇದೆ ನಾಯಿ ಈ ಹಿಂದೆಯೂ ಕೆಲವು ಜನರ ಮೇಲೆ ದಾಳಿ ಮಾಡಿತ್ತು, ಅದರ ಬಗ್ಗೆ ಮಾಲೀಕರಿಗೆ ದೂರು ನೀಡಿದ್ದರು ಏನು ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಪ್ರೇಮ್ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 291 ಮತ್ತು 125 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಾಜೇಶ್ ಅವರನ್ನು ಬಂಧಿಸಿದ್ದಾರೆ.

error: Content is protected !!