ನಮ್ಮ ದೇಹವೂ ಒಂದು ಯಂತ್ರದಂತೆಯೇ ಕೆಲಸ ಮಾಡುತ್ತದೆ. ಅದನ್ನು ಚೆನ್ನಾಗಿ ಓಡಿಸಬೇಕಾದರೆ ಸರಿಯಾದ ವಿಶ್ರಾಂತಿ, ಸರಿಯಾದ ಆಹಾರ ಮತ್ತು ಸರಿಯಾದ ಮಟ್ಟದ ವ್ಯಾಯಾಮ ಬೇಕಾಗುತ್ತದೆ. ಆದರೆ, ವಾರದಲ್ಲಿ ಎಷ್ಟು ದಿನ ವ್ಯಾಯಾಮ ಮಾಡಿದರೆ ಸೂಕ್ತ? ಅನ್ನೋದು ಕೆಲವರಿಗೆ ಗೊತ್ತಿರಲ್ಲ. ಎಲ್ಲರಿಗೂ ಒಂದೇ ಉತ್ತರ ಇರೋದಿಲ್ಲ, ನಿಮಗೆ ಹೆಲ್ಪ್ ಆಗ್ಲಿ ಅಂತ ನಾವು ಹೇಳ್ತಿದ್ದೇವೆ ಕೇಳಿ.
- ಪ್ರಾರಂಭಿಕರಿಗೆ 3 ದಿನಗಳು ಸಾಕು: ಹೊಸದಾಗಿ ವ್ಯಾಯಾಮ ಶುರುಮಾಡುವವರು ವಾರಕ್ಕೆ 3 ದಿನ ವ್ಯಾಯಾಮ ಮಾಡಿದರೆ ದೇಹ ನಿಧಾನವಾಗಿ ಫಿಟ್ ಆಗಲು ಶುರುವಾಗುತ್ತದೆ.
- ಮಧ್ಯಮ ಮಟ್ಟದವರಿಗೆ 4–5 ದಿನ ಸೂಕ್ತ: ಸ್ವಲ್ಪ ಮಟ್ಟಿನ ಅನುಭವವಿರುವವರು 4–5 ದಿನ ವ್ಯಾಯಾಮ ಮಾಡಿದರೆ ಶಕ್ತಿ, ತೂಕನಿಯಂತ್ರಣ ಹಾಗೂ ಸಹನೆ ಸಮತೋಲನವಾಗಿರುತ್ತದೆ.
- ತೂಕ ಕಡಿಮೆ ಮಾಡುವವರಿಗೆ 5 ದಿನ ಉತ್ತಮ: ಕ್ಯಾಲರಿ ಬರ್ನ್ ಹೆಚ್ಚಿಸಲು ವಾರಕ್ಕೆ 5 ದಿನ ವ್ಯಾಯಾಮ ಮಾಡುವುದು ಪರಿಣಾಮಕಾರಿ.
- ಮಾಂಸಖಂಡ ಬೆಳೆಸುವವರಿಗೆ 5 ದಿನ + ವಿಶ್ರಾಂತಿ ಅಗತ್ಯ: ಅತಿಯಾಗಿ ಜಿಮ್ ಮಾಡುವುದಕ್ಕಿಂತ, ವ್ಯಾಯಾಮದ ನಡುವೆ ಒಂದು ದಿನ ವಿಶ್ರಾಂತಿ ಕೊಡೋದರಿಂದ ಉತ್ತಮ ಮಸಲ್ ಗ್ರೋತ್ ಸಿಗುತ್ತದೆ.
- ದೇಹದ ಪ್ರತಿಕ್ರಿಯೆ ಕೇಳುವುದು ಮುಖ್ಯ: ನಿದ್ದೆ ಕೊರತೆ, ದೌರ್ಬಲ್ಯ, ನೋವು ಜಾಸ್ತಿ ಅನಿಸಿದರೆ ಒಂದು ದಿನ ಬ್ರೇಕ್ ಕೊಡಿ. ನಿಯಮಿತ ವ್ಯಾಯಾಮದ ಗುರಿಯೇ ಆರೋಗ್ಯ, ಒತ್ತಡವಲ್ಲ.
ವಾರಕ್ಕೆ 3–5 ದಿನ ವ್ಯಾಯಾಮವೇ ಹೆಚ್ಚು ಜನರಿಗೆ ಸೂಕ್ತ, ಆದರೆ ದೇಹದ ಅಗತ್ಯವೇ ಅಂತಿಮ ಉತ್ತರ ನೀಡುತ್ತದೆ ಅನ್ನೋದು ನೆನಪಿರಲಿ!

