Wednesday, November 26, 2025

Geyser | ಚಳಿಗಾಲದಲ್ಲಿ ಗೀಸರ್ ಕಾಯಿಸಿ ಸ್ನಾನ ಮಾಡ್ತೀರಾ? ಹಾಗಿದ್ರೆ ಈ ವಿಷ್ಯ ನಿಮಗೆ ಗೊತ್ತಿರಲೇ ಬೇಕು!

ಚಳಿಗಾಲ ಬಂದರೆ ಗೀಸರ್ ಆನ್‌ ಮಾಡಿ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡೋದು ಎಲ್ಲಾ ಮನೆಗಳ ದಿನಚರಿ. ಆದರೆ ಪ್ರತಿದಿನ ಬಳಸುವ ಈ ಗೀಸರ್‌ ಬಗ್ಗೆ ಹಲವರಿಗೆ ತಿಳಿಯದೇ ಇರೋ ಕೆಲವು ಸುರಕ್ಷತಾ ವಿಚಾರಗಳಿವೆ. ಬಿಸಿ ನೀರಿನ ಸೌಖ್ಯ ನಮ್ಮ ದೇಹಕ್ಕೆ ಆರಾಮ ಕೊಟ್ಟರೂ, ತಪ್ಪು ಬಳಕೆ ಅಥವಾ ನಿರ್ಲಕ್ಷ್ಯ ಪಾನ ಹಾನಿಗೆ ಕಾರಣವಾಗಬಹುದು.

  • ಗೀಸರ್ ಹೆಚ್ಚು ಹೊತ್ತು ಆನ್‌ ಬಿಡಬೇಡಿ: ಗೀಸರ್‌ನ್ನು ಅನಾವಶ್ಯಕವಾಗಿ ಹೆಚ್ಚು ಹೊತ್ತು ಆನ್‌ ನಲ್ಲಿ ಇಡುವುದು ಬಿಸಿ ನೀರಿನ ಒತ್ತಡ ಹೆಚ್ಚಿಸಿ ಬ್ಲಾಸ್ಟ್ ಅಪಾಯವನ್ನೂಂಟು ಮಾಡಬಹುದು. ಸ್ನಾನಕ್ಕೆ ಬೇಕಾದಷ್ಟೇ ಕಾಲ ಆನ್‌ ಮಾಡಿ.
  • ಸೆಫ್ಟಿ ವಾಲ್ವ್ ಚೆಕ್ ಮಾಡುವುದು ಅಗತ್ಯ: ಹಳೆಯ ಗೀಸರ್‌ಗಳಲ್ಲಿ ಥರ್ಮೋಸ್ಟಾಟ್ ಸರಿಯಾಗಿ ಕೆಲಸ ಮಾಡದಿದ್ದರೆ ನೀರು ಅತಿಯಾಗಿ ಕುದಿಯಬಹುದು. ವರ್ಷಕ್ಕೊಮ್ಮೆ ಸರ್ವಿಸ್ ಮಾಡಿಸಿಕೊಳ್ಳಿ.
  • ಬಿಸಿ ನೀರು ಮಿಶ್ರಣ ಮಾಡುವಾಗ ಎಚ್ಚರಿಕೆ: ಟ್ಯಾಪ್ ತೆರೆಯುವಾಗ ಬಿಸಿನೀರು ನೇರವಾಗಿ ಚರ್ಮಕ್ಕೆ ತಾಗದಂತೆ ಮೊದಲು ಮಿಶ್ರಣ ನೀರು ಹರಿಯಲಿ. ಇದು ಸ್ಕಾಲ್‌ಡ್‌ ಬರ್ನ್‌ನಿಂದ ರಕ್ಷಿಸುತ್ತದೆ.
  • ಪ್ಲಾಸ್ಟಿಕ್ ಪೈಪ್‌ಗಳನ್ನು ಬಳಸದಿರಿ: ಅತಿಯಾಗಿ ಬಿಸಿಯಾದ ನೀರು ಪ್ಲಾಸ್ಟಿಕ್ ಪೈಪ್‌ಗಳನ್ನು ಕರಗಿಸಿ, ಒಳಗೆ ಕೇಮಿಕಲ್‌ ಮಿಶ್ರಣವಾಗುವ ಅಪಾಯವಿರುತ್ತದೆ. ಉತ್ತಮ ಗುಣಮಟ್ಟದ ಸ್ಟೀಲ್ ಅಥವಾ ಹೀಟ್‌ಪ್ರೂಫ್ ಪೈಪ್‌ಗಳನ್ನು ಬಳಸುವುದು ಸೂಕ್ತ.
  • ಮಕ್ಕಳ ಮತ್ತು ವಯೋವೃದ್ಧರಿಗಾಗಿ ಜಾಗ್ರತೆ ಹೆಚ್ಚಿರಲಿ: ಚಿಕ್ಕವರು ಅಥವಾ ಹಿರಿಯರು ಸ್ವತಃ ತಾಪಮಾನ ಅಂದಾಜಿಸಲು ಸಾಧ್ಯವಿಲ್ಲ. ಸ್ನಾನಕ್ಕೂ ಮೊದಲು ನೀರಿನ ತಾಪಮಾನವನ್ನು ನೀವು ಪರೀಕ್ಷಿಸಿ.
error: Content is protected !!