ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಮಂಗಳವಾರ 28 ಮಾವೋವಾದಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಅವರಲ್ಲಿ 22 ನಕ್ಸಲರ ತಲೆಗೆ 89 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ‘ನಿಯದ್ ನೆಲ್ಲನಾರ್'(ನಿಮ್ಮ ಒಳ್ಳೆಯ ಗ್ರಾಮ) ಯೋಜನೆ, ಹೊಸ ಶರಣಾಗತಿ ಮತ್ತು ಪುನರ್ವಸತಿ ನೀತಿ ಹಾಗೂ “ಪೂನಾ ಮಾರ್ಗಂ(ಸಾಮಾಜಿಕ ಪುನರ್ವಸತಿ)” ದಿಂದ ಪ್ರಭಾವಿತರಾಗಿ 19 ಮಹಿಳೆಯರು ಸೇರಿದಂತೆ 28 ನಕ್ಸಲರು, ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾದರು ಎಂದು ಬಸ್ತಾರ್ ರೇಂಜ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಅವರು ಹೇಳಿದ್ದಾರೆ.
ಶರಣಾದವರಲ್ಲಿ, ನಾಲ್ಕು ಹಾರ್ಡ್‌ಕೋರ್ ಕೇಡರ್‌ಗಳಾಗಿದ್ದು, ವಿಭಾಗೀಯ ಸಮಿತಿ ಸದಸ್ಯ ಪಾಂಡಿ ಧ್ರುವ್ ಅಲಿಯಾಸ್ ದಿನೇಶ್(33); ದುಲೆ ಮಾಂಡವಿ ಅಲಿಯಾಸ್ ಮುನ್ನಿ(26), ಛತ್ತೀಸ್ ಪೋಯಂ(18) ಮತ್ತು ಪಡ್ನಿ ಓಯಂ(30) ಸೇರಿದ್ದಾರೆ.

