Friday, November 28, 2025

ಶ್ವೇತಭವನದ ಬಳಿ ನ್ಯಾಷನಲ್ ಗಾರ್ಡ್‌ ಮೇಲೆ ಗುಂಡಿನ ದಾಳಿ: ಇಬ್ಬರು ಸೈನಿಕರ ಸಾವು, ಎಚ್ಚರಿಕೆ ಕೊಟ್ಟ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಷಿಂಗ್ಟನ್ ಡಿಸಿ ಬುಧವಾರ ಆಘಾತಕಾರಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಶ್ವೇತಭವನದಿಂದ ಸ್ವಲ್ಪ ದೂರದಲ್ಲಿರುವ ಮೆಟ್ರೋ ನಿಲ್ದಾಣದ ಬಳಿ, ಇಬ್ಬರು ವೆಸ್ಟ್ ವರ್ಜೀನಿಯಾ ನ್ಯಾಷನಲ್ ಗಾರ್ಡ್ ಸದಸ್ಯರ ಮೇಲೆ ಹಠಾತ್ ಗುಂಡಿನ ದಾಳಿ ನಡೆದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಇತರ ಸೈನಿಕರು ದಾಳಿಕೋರನನ್ನು ನಿಗ್ರಹಿಸಿದರು. ಗಾಯಗೊಂಡ ಎರಡು ಗಾರ್ಡ್ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಮಾಹಿತಿ ಪ್ರಕಾರ ಓರ್ವ ಬಂದೂಕುಧಾರಿ ವ್ಯಕ್ತಿ ದಾಳಿ ನಡೆಸಿದ್ದು, ಈಗಾಗಲೇ ತನಿಖೆ ಪ್ರಾರಂಭವಾಗಿದೆ. ಶಂಕಿತನನ್ನು 29 ವರ್ಷದ ರಹಮಾನಲ್ಲಾ ಲಕನ್ವಾಲ್ ಎಂದು ಗುರುತಿಸಲಾಗಿದ್ದು, 2021ರಲ್ಲಿ ಅಮೆರಿಕ ಪ್ರವೇಶ ಮಾಡಿದ ಅಫ್ಘಾನ್ ಪ್ರಜೆ ಎಂದು ತಿಳಿದುಬಂದಿದೆ. ದಾಳಿಕೋರನು ಗಾಯಗೊಂಡಿದ್ದರೂ ಅವನ ಜೀವಕ್ಕೆ ಅಪಾಯವಿಲ್ಲ ಎಂದು ತಿಳಿದುಬಂದಿದೆ.

ಘಟನೆ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಕ್ಷಣವೇ ರಾಜಧಾನಿಗೆ 500 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲು ಆದೇಶಿಸಿದ್ದಾರೆ. ಈಗ ನಗರದಲ್ಲಿ ಸುಮಾರು 2,200 ರಾಷ್ಟ್ರೀಯ ಗಾರ್ಡ್ ಸದಸ್ಯರು ನಿಯೋಜಿತವಾಗಿದ್ದಾರೆ. ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ದಾಳಿಕೋರನನ್ನು “ಪ್ರಾಣಿ” ಎಂದು ಕರೆದಿದ್ದು, ಭೀಕರ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ.

error: Content is protected !!