Friday, November 28, 2025

ಅಕ್ರಮ ಗೋಸಾಗಾಟ ಪರಿಶೀಲನೆ: ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ

ಹೊಸದಿಗಂತ ವರದಿ ಕಲಬುರಗಿ:

ಗೋವುಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ತಡೆದು, ಅಕ್ರಮ ಗೋವು ಸಾಗಣೆ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ಮಾಡಿದ್ದಕ್ಕೆ ಇಬ್ಬರು ಹಿಂದು ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ ಟನೆ ನಗರದ ರಿಂಗ್​ ರಸ್ತೆಯ ರಾಮನಗರದ ಬಳಿ ಬುಧವಾರ ನಡೆದಿದೆ.

ಹಿಂದು ಕಾರ್ಯಕರ್ತರಾದ ರೋಹಿತ್​ ಪಿಸ್ಕೆ, ಅನೀಲ ಹಲ್ಲೆಗೊಳಗಾದವರು.
ಗೋವುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದಿರುವ ಹಿಂದು ಕಾರ್ಯಕರ್ತರಾದ ರೋಹಿತ್​, ಅನೀಲ ಸೇರಿ ಇತರರು ಅಕ್ರಮ ಗೋವುಗಳು ಇವೆಯೇ ಎಂದು ಪ್ರಶ್ನಿಸಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳಿಯ ಅನ್ಯಕೋಮಿನ ಯುವಕರು ದಾಖಲೆ ಜತೆಗೆ, ಅನುಮತಿ ಪಡೆದು ಗೋವುಗಳ ಸಾಗಣೆ ಮಾಡುತ್ತಿರುವ ವಾಹವನ್ನು ತಡೆಯುತ್ತೀರಾ ಎಂದು ಧಮ್ಕಿ ಹಾಕಿದ್ದಾರೆ.

ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ರೋಹಿತ್​ ಮತ್ತು ಅನೀಲ ಮೇಲೆ ಮೂರ್ನಾಲ್ಕು ಜನರು ಕೂಡಿ ಕೈಗಳಿಂದ ಕಟ್ಟಿಗೆ ತುಂಡಿನಿಂದ ಹಲ್ಲೆ ಮಾಡಿದ ಹಲ್ಲೆಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು,ಸಬ್​ ಅರ್ಬನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಶಿವಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡು ದಾಖಲಾದ ಹಿಂದೂ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು.

error: Content is protected !!