Friday, November 28, 2025

Read It | ಅಮರತ್ವ ಪಡೆದ ವಿಶ್ವದ ಅತ್ಯಂತ ಹಳೆಯ ಜೀವಿ ಯಾವುದು? ಗೊತ್ತಾದ್ರೆ ಶಾಕ್ ಆಗ್ತೀರಾ!

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಗೂ ಮರಣ ಅಚಲ ಸತ್ಯ. ಆದರೆ ಈ ನಿಯಮಕ್ಕೂ ಸವಾಲು ಹಾಕುವಂತೆ ಒಂದು ವಿಚಿತ್ರ ಜೀವಿ ಇದೆ. ಅದು ಸಾಯದೇ ಮತ್ತೆ ತನ್ನ ಜೀವನವನ್ನು ಹೊಸದಾಗಿ ಆರಂಭಿಸಬಲ್ಲದು. ವಿಜ್ಞಾನಿಗಳಿಗೂ ಅಚ್ಚರಿ ಮೂಡಿಸಿರುವ ಈ ಜೀವಿಯೇ ಜೆಲ್ಲಿಫಿಶ್. ಇದು ಪ್ರಕೃತಿಯಲ್ಲೇ ದೊರೆಯುವ ಅತ್ಯಂತ ಅಪರೂಪದ ಅದ್ಭುತಗಳಲ್ಲಿ ಒಂದೆಂದು ಹೇಳಬಹುದು.

ಅಮರತ್ವ ಪಡೆದ ಏಕೈಕ ಜೀವಿ:

Turritopsis dohrnii ಎಂದು ಕರೆಯಲ್ಪಡುವ ಈ ಜೆಲ್ಲಿಫಿಶ್ ಸತ್ತ ನಂತರವೂ ತನ್ನ ದೇಹವನ್ನು ಸಂಪೂರ್ಣವಾಗಿ ಮತ್ತೆ ರೂಪಿಸಿಕೊಂಡು ಬಾಲ್ಯಾವಸ್ಥೆಯಿಂದ ಹೊಸ ಜೀವನ ಶುರುಮಾಡುತ್ತವೆ.

ಯಾವುದೇ ಗಾಯ ಅಥವಾ ಅಪಾಯ ಎದುರಾದರೂ ಈ ಜೆಲ್ಲಿಫಿಶ್ ತನ್ನ ಕೋಶಗಳನ್ನು ಪುನಃ ರೂಪಾಂತರ ಮಾಡಿಕೊಂಡು ಹೊಸ ಜೀವನವನ್ನು ಆರಂಭಿಸುತ್ತದೆ. ಇದು ಗಾತ್ರದಲ್ಲಿ ಬಹಳ ಚಿಕ್ಕದು, ಆದರೆ ಇದರ ವೈಜ್ಞಾನಿಕ ಶಕ್ತಿ ಅತ್ಯಂತ ದೊಡ್ಡದು ಎನ್ನುತ್ತಾರೆ ವಿಜ್ಞಾನಿಗಳು. ಈ ಜೆಲ್ಲಿಫಿಶ್‌ನ ಪುನರ್ಜನ್ಮ ಶಕ್ತಿಯ ಮೇಲೆ ಇಂದು ವೈದ್ಯಕೀಯ ವಿಜ್ಞಾನವೂ ಸಂಶೋಧನೆ ನಡೆಸುತ್ತಿದೆ.

ಜೆಲ್ಲಿಫಿಶ್ ಬಗ್ಗೆ ತಿಳ್ಕೊಂಡ್ರೆ ನಮಗೆ ಗೊತ್ತಾಗೋದೊಂದೇ ವಿಷಯ ಅದು ಪ್ರಕೃತಿಯಲ್ಲಿ ಅಸಾಧ್ಯ ಅನ್ನೋದೇ ಇಲ್ಲ ಅಂತ.

error: Content is protected !!