January22, 2026
Thursday, January 22, 2026
spot_img

ಲಿವ್ಇನ್ ಸಂಬಂಧಗಳಿಗೂ IPC ಸೆಕ್ಷನ್ 498A ಅನ್ವಯ: ಹೈಕೋರ್ಟ್​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಂಡ ಎಂಬ ಪದವು ಐಪಿಸಿ ಸೆಕ್ಷನ್ 498ಎ( ಮದುವೆಯಾದ ಮಹಿಳೆಯ ಮೇಲಿನ ಕ್ರೌರ್ಯ ಮತ್ತು ಹಿಂಸೆ) ಅಲ್ಲಿ ಬಳಸಿರುವುದು ಕೇವಲ ಕಾನೂನು ಬದ್ಧವಾಗಿ ವಿವಾಹವಾದ ಸಂಬಂಧಕ್ಕೆ ಮಾತ್ರ ಸೀಮಿತವಾಗೋದಿಲ್ಲ. ಅದು ಲಿವ್-ಇನ್-ರಿಲೇಷನ್ ಶಿಪ್ ಗಳಿಗೂ ಅನ್ವಯಿಸಲಿದೆ ಎಂಬುದಾಗಿ ಹೈಕೋರ್ಟ್ ಮಹತ್ವದ ಅಭಿಪ್ರಾಯ ಪಟ್ಟಿದೆ.

ಇತ್ತೀಚಿನ ದಿನಗಳಲ್ಲಿ ಲಿವ್​​-ಇನ್​ ಸಂಬಂಧಗಳು ಹೆಚ್ಚಾಗುತ್ತಿರುವ ನಡುವೆ ಹೈಕೋರ್ಟ್​​ನ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಪ್ರಕರಣವೊಂದರ ಅರ್ಜಿ ವಿಚಾರಣೆ ವೇಳೆ ಕೋರ್ಟ್​​ , ವಿವಾಹದ ಸ್ವರೂಪದ ಸಂಬಂಧಗಳಿಗೂ ಕ್ರೌರ್ಯದ ವಿಚಾರದಲ್ಲಿ IPC ಸೆಕ್ಷನ್ 498ಎ ಅನ್ವಯವಾಗಲಿದೆ ಎಂದು ತಿಳಿಸಿದೆ. ಅಲ್ಲದೆ ಈ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನ ನ್ಯಾಯಮೂರ್ತಿ ಸೂರಜ್​​ ಗೋವಿಂದ್​​ರಾಜ್​​ ವಜಾಗೊಳಿಸಿದ್ದಾರೆ.

ದೂರುದಾರೆಯೊಂದಿಗೆ ಅರ್ಜಿದಾರನ ವಿವಾಹ ಕಾನೂನಾತ್ಮಕವಾಗಿ ಅಮಾನ್ಯವಾಗಿರುವುದರಿಂದ, 498ಎ ಅನ್ವಯಿಸದು ಎಂದು ಶಿವಮೊಗ್ಗ ಮೂಲದ ಅರ್ಜಿದಾರರ ಪರವಾಗಿ ವಕೀಲರು ವಾದಿಸಿದ್ದರು. ಅರ್ಜಿದಾರ ಈಗಾಗಲೇ ವಿವಾಹಿತನಾಗಿರುವುದರಿಂದ, ಆತ ದೂರುದಾರೆಯ ಗಂಡ ಎಂದು ಪರಿಗಣಿಸಲಾಗದು. ಹೀಗಾಗಿ 498ಎ ಅಡಿಯಲ್ಲಿ ಪ್ರಕರಣ ದಾಖಲಿಸುವಂತಿಲ್ಲ ಎಂದು ವಾದಿಸಿದ್ದರು.

ಆದರೆ ಅರ್ಜಿದಾರರ ಪರ ವಕೀಲರ ವಾದ ಒಪ್ಪದ ನ್ಯಾಯಾಲಯ, ತನ್ನ ಮೊದಲ ವಿವಾಹವನ್ನು ಮರೆಮಾಚಿ ದೂರುದಾರೆ ಜೊತೆಗೆ ಮದುವೆ ಸ್ವರೂಪದ ಸಂಬಂಧ ಇಟ್ಟುಕೊಂಡಿದ್ದಾರೆ. ಅಲ್ಲದೆ ಮೊದಲೇ ಬೇರೊಬ್ಬಳ ಜೊತೆ ಮದುವೆಯಾಗಿ, ಒಂದು ಮಗುವನ್ನೂ ಹೊಂದಿದ್ದಾರೆ. ಹೀಗಿದ್ದರೂ ಆ ವಿಷಯ ಮರೆಮಾಚಿ ದೂರುದಾರೆಯ ಜೊತೆ ಮದುವೆಯಾಗಿ ವಾಸ ಮಾಡಿದ್ದಾರೆ. ಆಕೆಯ ಕುಟುಂಬದಿಂದ ಚಿನ್ನ, ಬೆಳ್ಳಿ ಮತ್ತು ನಗದು ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕವೂ ಹೆಚ್ಚಿನ ಬೇಡಿಕೆಗಳನ್ನು ಮಾಡಿ, ಹಿಂಸೆ ಹಾಗೂ ಕ್ರೌರ್ಯ ನಡೆಸಲಾಗಿದೆ. ಆಕೆ ಪ್ರಾಣ ತೆಗೆಯಲೂ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ಹೀಗಾಗಿ ಅರ್ಜಿದಾರರ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಈ ಹಿನ್ನಲೆಯಲ್ಲಿ ಅರ್ಜಿದಾರರ ವಾದವನ್ನು ಒಪ್ಪಲು ಆಗದು. ಕಾನೂನಾತ್ಮಕವಾಗಿಲ್ಲ ಎಂಬ ನೆಪದಲ್ಲಿ 498ಎಯಿಂದ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ ಎಂಬುದಾಗಿ ಹೈಕೋರ್ಟ್ ನ್ಯಾಯಪೀಠವು ಸ್ಪಷ್ಟ ಪಡಿಸಿತು.

Must Read