Friday, November 28, 2025

Rice series 41 | ಆರೋಗ್ಯಕರ ನೆಲ್ಲಿಕಾಯಿ ಚಿತ್ರಾನ್ನ ಸವಿದಿದ್ದೀರಾ?

ಸಾಮಾನ್ಯ ಚಿತ್ರಾನ್ನಕ್ಕಿಂತ ವಿಭಿನ್ನವಾದ, ಆರೋಗ್ಯಕ್ಕೂ ರುಚಿಗೂ ಒಟ್ಟಿಗೆ ಮೆಚ್ಚುವ ಉಪಹಾರ ಅಂತ ಇದ್ರೆ ಅದು ನೆಲ್ಲಿಕಾಯಿ ಚಿತ್ರಾನ್ನ. ವಿಟಮಿನ್–ಸಿ ಸಮೃದ್ಧವಾದ ನೆಲ್ಲಿಕಾಯಿ ದೇಹಕ್ಕೆ ಶಕ್ತಿಯನ್ನೂ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಮನೆಯಲ್ಲಿ ಸುಲಭವಾಗಿ, ಕಡಿಮೆ ಪದಾರ್ಥಗಳಿಂದ ತಯಾರಿಸಬಹುದಾದ ಈ ನೆಲ್ಲಿಕಾಯಿ ಚಿತ್ರಾನ್ನ ಎಲ್ಲರಿಗೂ ಇಷ್ಟವಾಗುತ್ತದೆ.

ಬೇಕಾಗುವ ಪದಾರ್ಥಗಳು

ಅನ್ನ – 2 ಕಪ್
ನೆಲ್ಲಿಕಾಯಿ – 3 ರಿಂದ 4 (ತುರಿದದ್ದು)
ಹಸಿಮೆಣಸು – 2 (ಸಣ್ಣದಾಗಿ ಕತ್ತರಿಸಿದ)
ಶುಂಠಿ – 1 ಟೀಸ್ಪೂನ್ (ತುರಿದದ್ದು)
ಸಾಸಿವೆ – 1 ಟೀಸ್ಪೂನ್
ಕಡಲೆ ಬೇಳೆ – 1 ಟೇಬಲ್ ಸ್ಪೂನ್
ಉದ್ದಿನ ಬೇಳೆ – 1 ಟೇಬಲ್ ಸ್ಪೂನ್
ಈರುಳ್ಳಿ – 1 (ಐಚ್ಛಿಕ, ಸಣ್ಣ ತುಂಡು)
ಕರಿಬೇವು – ಕೆಲವು ಎಲೆಗಳು
ಅರಿಶಿನ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ತಯಾರಿಸುವ ವಿಧಾನ

ಮೊದಲು ಬಾಣಲೆಗೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಸೇರಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಇದಕ್ಕೆ ಹಸಿಮೆಣಸು, ಶುಂಠಿ, ಕರಿಬೇವು ಮತ್ತು ಈರುಳ್ಳಿ ಹಾಕಿ ಸ್ವಲ್ಪ ಸಮಯ ಫ್ರೈ ಮಾಡಿ.

ಈಗ ಇದಕ್ಕೆ ಅರಿಶಿನ ಹಾಗೂ ತುರಿದ ನೆಲ್ಲಿಕಾಯಿ ಸೇರಿಸಿ ಮಧ್ಯಮ ಉರಿಯಲ್ಲಿ 2–3 ನಿಮಿಷ ಬೇಯಿಸಬೇಕು. ನೆಲ್ಲಿಕಾಯಿಯ ಹಸಿ ವಾಸನೆ ಹೋಗುವಷ್ಟು ಮಾತ್ರ ಬೇಯಿಸಿದರೆ ಸಾಕು. ನಂತರ ಉಪ್ಪು ಸೇರಿಸಿ ಕಲಸಿ.
ಈ ಮಿಶ್ರಣಕ್ಕೆ ಬೇಯಿಸಿದ ಅನ್ನವನ್ನು ಹಾಕಿ ನಿಧಾನವಾಗಿ ಮಿಶ್ರಣ ಮಾಡಿ. ಎಲ್ಲವೂ ಒಗ್ಗಟ್ಟಾಗಿ ಬೆರೆತ ಮೇಲೆ ಗ್ಯಾಸ್ ಆರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

error: Content is protected !!