ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿಯ ವಿಶ್ವಗೀತಾ ಪಾರಾಯಣ ವೇದಿಕೆ ಬಳಿ ಲಕ್ಷ ಕಂಠ ಭಗವದ್ಗೀತೆ ಪಠಣ ನಡೆಯಿತು, ಸಾವಿರಾರು ಭಕ್ತರು ಭಗವದೀತೆಯ ಶ್ಲೋಕ ಪಠಿಸಿದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ಥಳೀಯ ಬಿಜೆಪಿ ನಾಯಕರು ದನಿಗೂಡಿಸಿದರು.
ಪ್ರಧಾನಿ ಮೋದಿ ಪಠಿಸಿದ ಭಗವದ್ಗೀತೆಯ 15ನೇ ಅಧ್ಯಾಯ ಅತ್ಯಂತ ವಿಶೇಷ ಮತ್ತು ಮಹತ್ವವುಳ್ಳದ್ದಾಗಿದೆ. ʻನಿನ್ನ ಕರ್ಮವನ್ನ ನೀನು ಮಾಡು ಫಲಾಫಲದ ಚಿಂತೆ ಬಿಡುʼ… ಎನ್ನುವ ಮಾತನ್ನು ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಹೇಳಿದ ಕಿವಿಮಾತು. ಜಗತ್ತು ಆತ್ಮ ಪರಮಾತ್ಮನ ಕುರಿತಾದ ಗೂಡತತ್ವ. ಜ್ಞಾನವನ್ನ ಗ್ರಹಿಸುವ ಮೂಲಕ ಅಂತಿಮ ಸತ್ಯ ದರ್ಶನ ಪಡೆಯಬಹುದು. 15ನೇ ಅಧ್ಯಾಯವನ್ನ ಅರ್ಥ ಮಾಡಿಕೊಂಡವನು ಪರಿಪೂರ್ಣತೆ ಕಾಣುತ್ತಾನೆʼ ಎಂಬುದು ಈ ಅಧ್ಯಾಯದ ಮಹತ್ವ.
ಅಲ್ಲದೇ ಇದು ಸಂಸಾರದ ಅಶ್ವತ್ಥ ಮರವನ್ನ ಉದಾಹರಣೆಯಾಗಿ ಬಳಸಿಕೊಂಡು ಜಗತ್ತಿನ ಸೃಷ್ಟಿ, ಅದರ ಅನಿಶ್ಚಿತತೆ ಮತ್ತು ವೈರಾಗ್ಯದ ಮೂಲಕ ಅದರಿಂದ ಮುಕ್ತಿ ಪಡೆಯುವ ಮಾರ್ಗವನ್ನ ವಿವರಿಸುತ್ತದೆ. ಈ ಅಧ್ಯಾಯವು ಈಶ್ವರನ (ದೇವರ) ಸರ್ವವ್ಯಾಪಕತೆಯನ್ನು ವಿವರಿಸುತ್ತದೆ, ಪ್ರತಿಯೊಂದು ಸೃಷ್ಟಿಯಲ್ಲೂ ಅವನ ಇರುವಿಕೆಯನ್ನ ತೋರಿಸುತ್ತದೆ. ಇದು ಆತ್ಮದ ನಿಜವಾದ ಸ್ವರೂಪ ತಿಳಿಸುತ್ತದೆ ಮತ್ತು ವ್ಯಕ್ತಿ, ಜಗತ್ತು ಮತ್ತು ದೇವರ ನಡುವಿನ ಸಂಬಂಧವನ್ನ ವಿವರಿಸುತ್ತದೆ.
ಪ್ರಧಾನಿ ಪಠಿಸಿದ ಭಗವದ್ಗೀತೆ 15ನೇ ಅಧ್ಯಾಯದ ವಿಶೇಷತೆ ಏನು?

