January22, 2026
Thursday, January 22, 2026
spot_img

ಬೆಂಗಳೂರು ನಗರದ ಹಲವೆಡೆ ವಿದ್ಯುತ್‌ ವ್ಯತ್ಯಯ: ನಿಮ್ಮ ಏರಿಯಾ ಲಿಸ್ಟ್‌ನಲ್ಲಿದೆಯಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಿಟಿಸಿಎಲ್ ವತಿಯಿಂದ ಕೈಗೊಳ್ಳಲಾದ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ 66/11 ಕೆವಿ ಪ್ಲಾಟಿನಮ್ ಸಿಟಿ ಉಪಕೇಂದ್ರ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 10:00 ರಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ  ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಉಪಕೇಂದ್ರದ ಪ್ರಮುಖ ಲೈನ್‌ಗಳಲ್ಲಿ ತಾಂತ್ರಿಕ ದುರಸ್ತಿ, ಸಾಧನ ಬದಲಾವಣೆ ಮತ್ತು ಸಿಸ್ಟಮ್ ಅಪ್‌ಗ್ರೇಡ್ ಕಾಮಗಾರಿ ನಡೆಯುತ್ತಿರುವ ಕಾರಣ ತಾತ್ಕಾಲಿಕ ವಿದ್ಯುತ್ ಸ್ಥಗಿತ ಅನಿವಾರ್ಯವಾಗಿದೆ ಎಂದು ತಿಳಿಸಲಾಗಿದೆ.

ವ್ಯತ್ಯಯದಿಂದ ವ್ಯಾಪಕವಾಗಿ ಕೈಗಾರಿಕಾ ಘಟಕಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ನಿವಾಸಿ ಪ್ರದೇಶಗಳು ಪ್ರಭಾವಿತರಾಗುವ ಸಾಧ್ಯತೆ ಇದೆ. ಅವುಗಳಲ್ಲಿ ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್,ಕರ್ಲೋನ್, ರಾಘವೇಂದ್ರ ಲೇಔಟ್, RNS ಮೋಟಾರ್, ಮುನೇಶ್ವರ ನಗರ, ವೈಷ್ಣವಿ ನಕ್ಷತ್ರ, ಅಪಾರ್ಟ್‌ಮೆಂಟ್, ಲೆಫ್ಟಿನೆಂಟ್ ಕಾರ್ಲೆ ಪ್ರದೇಶ, ಮುನೇಶ್ವರ ನಗರ 1ನೇ ಬ್ಲಾಕ್, RTO ಟ್ರಾಕ್‌ಮೆನ್ ರಸ್ತೆ, ಪ್ಲಾಟಿನಂ ಸಿಟಿ ಅಪಾರ್ಟ್‌ಮೆಂಟ್, BFW, NTRO, ಜಲ ಸೌಧ ಮತ್ತು ಸುತ್ತಮುತ್ತಲಿನ ಈ ಎಲ್ಲ ಪ್ರದೇಶಗಳಲ್ಲಿ ದಿನಪೂರ್ತಿ ವಿದ್ಯುತ್ ಪೂರೈಕೆಯಲ್ಲಿ ಹಿಂದಿನಿಗಿಂತ ಹೆಚ್ಚು ವ್ಯತ್ಯಯ ಉಂಟಾಗಬಹುದೆಂದು ಬೆಸ್ಕಾಂ ಎಚ್ಚರಿಕೆ ನೀಡಿದೆ.

Must Read