January20, 2026
Tuesday, January 20, 2026
spot_img

ತಜಕಿಸ್ತಾನದಲ್ಲಿ ಡ್ರೋನ್ ದಾಳಿ: 3 ಚೀನೀ ಕಾರ್ಮಿಕರು ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದ ಗಡಿಯಾಚೆಯಿಂದ ತಜಕಿಸ್ತಾನದ ಮೇಲೆ ನಡೆಸಲಾದ ಡ್ರೋನ್ ದಾಳಿಯಲ್ಲಿ ಮೂವರು ಚೀನೀ ಕಾರ್ಮಿಕರು ಸಾವನ್ನಪ್ಪಿದ ಘಟನೆ ನಡೆದಿದೆ.

ತಜಕಿಸ್ತಾನದ ನೈಋತ್ಯ ಖಟ್ಲಾನ್ ಪ್ರದೇಶದ ವಸತಿ ಶಿಬಿರದ ಕಂಪನಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ತಜಕಿಸ್ತಾನದ ವಿದೇಶಾಂಗ ಸಚಿವಾಲಯವನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಈ ದಾಳಿಯನ್ನು ಮಾನವರಹಿತ ವೈಮಾನಿಕ ವಾಹನವನ್ನು ಬಳಸಿ ನಡೆಸಲಾಗಿದೆ. ಅದು ಸ್ಫೋಟಕಗಳನ್ನು ಹೊತ್ತೊಯ್ಯುತ್ತಿತ್ತು ಎಂದು ಸಚಿವಾಲಯವು ತಿಳಿಸಿದೆ. ಚೀನಾ ರಾಯಭಾರ ಕಚೇರಿಯು ತಜಿಕಿಸ್ತಾನದ ಅಧಿಕಾರಿಗಳಿಗೆ ಸಂಪೂರ್ಣ ತನಿಖೆ ನಡೆಸಲು ಮತ್ತು ದೇಶದಲ್ಲಿ ಚೀನಾದ ನಾಗರಿಕರು, ಸಂಸ್ಥೆಗಳು ಮತ್ತು ಯೋಜನೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ.

Must Read