March 12, 2026
Thursday, March 12, 2026
spot_img

ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿತು ಶ್ರೀರಾಮನಾಮ ಜಪ ಅಭಿಯಾನ

ಹೊಸದಿಗಂತ ವರದಿ, ಪರ್ತಗಾಳಿ:

ಎಪ್ರೀಲ್ ೧೭, ೨೦೨೪ರಂದು ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿಯವರು ಆರಂಭಿಸಿದ ಶ್ರೀರಾಮನಾಮ ಜಪ ಅಭಿಯಾನ ಹೊಸ ಇತಿಹಾಸ ಗೋಕರ್ಣ ಪರ್ತಗಾಳಿ ಮಠದ ಪುಟದಲ್ಲಿ ದಾಖಲಿಸಿದೆ.

೫೫೦ ದಿನಗಳಲ್ಲಿ ೫೯೩ ಕೋಟಿ ಜಪ ಇಂಡಿಯಾ ಬುಕ್ ಆಫ್ ರೇಕಾರ್ಡ, ಏಷ್ಯಾ ಬುಕ್ ರೇಕಾರ್ಡನಲ್ಲಿ ದಾಖಲಾಗಿದೆ.

ಈ ಕುರಿತು ಏಷ್ಯಾ ಬುಕ್ ಆಫ್ ರೆಕಾರ್ಡನ ಡಾ. ಚಿತ್ರಾ ಜೈನ್ ದಾಖಲೆಯ ಕುರಿತು ಮಾಹಿತಿ ನೀಡಿದರು. ೩ ರಾಜ್ಯದ ಜಪಕೇಂದ್ರಗಳಲ್ಲಿ ನಾವು ಪರೀಶೀಲನೆ ಮಾಡಿದ್ದೆವೆ. ಶ್ರೀ ರಾಮ ಜಯರಾಮ, ಜಯಜಯ ರಾಮ ಭಕ್ತಿಯ ಹೊಸ ಸಂಚಲನ ಮೂಡಿಸಿದೆ. ನಾವು ಹೃದಯ ಸಂಬoದಿತ ಖಾಯಿಲೆಗಳು ಎದುರಾದಗ ವಿಠ್ಠಲ ನಾಮ ಜಪ ಮಾಡಲು ಹೇಳುತ್ತೆವೆ. ಆದರೆ ಇಲ್ಲಿ ಶ್ರೀ ರಾಮ ಜಯರಾಮ ನಾಮ ಜಪವೂ ಹೊಸ ಕಂಪನವನ್ನೆ ಸೃಷ್ಟಿಸಿದೆ. ಹಲವು ರೋಗಗಳು, ಹಲವು ಸಮಸ್ಯೆಗಳು ಶ್ರೀರಾಮನಾಮ ಜಪ ಮಾತ್ರದಿಂದದಲೆ ದೂರವಾಗಿರುವದು ನಮ್ಮ ಗಮನಕ್ಕೆ ಬಂದಿದೆ.

೧೨೦ ಕೇಂದ್ರ, ೧೦೪ ಸಹಕೇಂದ್ರಗಳಲ್ಲಿ ೫೯೩ ಕೋಟಿ ಜಪದ ಪಠನೆ ಮಾಡುವ ಮೂಲಕ ಜಿಎಸ್‌ಬಿ ಸಮಾಜವೂ ಹೊಸ ದಾಖಲೆ ಸೃಷ್ಟಿಸಿದೆ ಎಂದು ಅವರು ಹೇಳಿದರು. ಪರಮೇಶ್ವರ ಯಾಗಲೆ ಪಾಟೀಲ್ ಆಗಮಿಸಿ ಶ್ರೀರಾಮ ನಾಮ ಜಪವೂ ವರ್ಡ ಬುಕ್ ರೆಕಾರ್ಡ ದಾಖಲಾಗಿದೆ ಎಂದು ಶ್ರೀಗಳಿಗೆ ಪ್ರಮಾಣ ಪತ್ರ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !