ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತ್ನಿಯನ್ನು ಮರ್ಡರ್ ಮಾಡಿದ ಪತಿ, ಹೆಣದ ಮುಂದೆ ಫೋಟೊ ತೆಗೆದುಕೊಂಡು ಅದನ್ನು ವಾಟ್ಸಾಪ್‌ನ ಸ್ಟೇಟಸ್ ಹಾಕಿದ್ದಾನೆ.
ಹೌದು, ತಮಿಳುನಾಡಿನ ಕೊಯಮತ್ತೂರಿನಲ್ಲಿ ಭೀಕರ ಘಟನೆ ನಡೆದಿದ್ದು, ಕೊಲೆಗಾರನನ್ನು ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಪ್ರಿಯಾ, ತನ್ನ ಪತಿ ಬಾಲಮುರುಗನ್ ಅವರಿಂದ ಬೇರ್ಪಟ್ಟಿದ್ದರು. ಹಾಸ್ಟೆಲ್‌ನಲ್ಲಿ ವಾಸವಿದ್ದರು. ಬಾಲಮುರುಗನ್ ಹುಡುಗಿಯ ರೀತಿ ಬಟ್ಟೆ ಹಾಕಿಕೊಂಡು ಹಾಸ್ಟೆಲ್‌ಗೆ ಬಂದಿದ್ದ.
ಭೇಟಿಯಾದ ಸ್ವಲ್ಪ ಸಮಯದ ನಂತರ ಇಬ್ಬರ ನಡುವೆ ವಾಗ್ವಾದ ನಡೆಯಿತು. ಹಠಾತ್ ದಾಳಿಯಲ್ಲಿ, ಬಾಲಮುರುಗನ್ ಕತ್ತಿ ಹೊರತೆಗೆದು ಹಾಸ್ಟೆಲ್‌ನಲ್ಲಿ ಆಕೆಯನ್ನು ಕಡಿದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಅವನು ಆಕೆಯ ದೇಹದೊಂದಿಗೆ ಸೆಲ್ಫಿ ತೆಗೆದುಕೊಂಡು ಅದನ್ನು ತನ್ನ ವಾಟ್ಸಾಪ್ ಸ್ಟೇಟಸ್ ಆಗಿ ಅಪ್‌ಲೋಡ್ ಮಾಡಿ, ಆಕೆ ತನಗೆ ದ್ರೋಹ ಮಾಡಿದ್ದಾಳೆಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿ ನಡೆಯುತ್ತಿದ್ದಂತೆ ಹಾಸ್ಟೆಲ್ ನಿವಾಸಿಗಳು ಭಯಭೀತರಾಗಿ ಹೊರಗೆ ಓಡಿಹೋಗಿದ್ದಾರೆ. ಬಾಲಮುರುಗನ್ ಸ್ಥಳದಲ್ಲೇ ಇದ್ದು ಪೊಲೀಸರು ಬರುವವರೆಗೂ ಕಾಯುತ್ತಿದ್ದ. ಆತನನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಪತ್ನಿಗೆ ಬೇರೊಬ್ಬ ಯುವಕನ ಜತೆ ಸಲುಗೆ ಹೆಚ್ಚಾಗಿದ್ದ ಕಾರಣ ಬಾಲಮುರುಗನ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

